ಶಿವಮೊಗ್ಗ : ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ಬಾನುರವರ ಹುಟ್ಟುಹಬ್ಬವನ್ನು ಅವರ ಕಛೇರಿಯಲ್ಲಿ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಇಂದು ಸರಳವಾಗಿ ಆಚರಿಸಿದರು.

ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಬಲ್ಕೀಶ್ಬಾನು ಅವರು ಹುಟ್ಟುಹಬ್ಬದಂತಹ ಆಚರಣೆಗಳು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಭಾವನೆಗಳನ್ನು ಬೆಳೆಸುತ್ತವೆ. ಕ್ರೀಯಾಶೀಲವಾಗಿ ಕೆಲಸ ಮಾಡಲು ಸಹಾಯ ಮಾಡುತ್ತವೆ. ಜಾತಿ,

ಧರ್ಮ ಮರೆತು ನನ್ನ ಜನ್ಮದಿನಾಚರಣೆಯನ್ನು ಆಚರಿಸಿದ್ದಕ್ಕೆ ಧನ್ಯವಾದಗಳು. ಬಡವರ ಸೇವೆಗೆ ನಾನು ಸದಾಸಿದ್ಧ. ನೀವು ಕೂಡ ಶೋಷಿತರ ಪರವಾಗಿ ಧ್ವನಿಎತ್ತಿ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರಾದ ಸ್ಟೆಲಾ ಮಾರ್ಟೀನ್, ಶಮೀಮ್ ಬಾನು, ನಾಜೀಮಾ, ಅರ್ಚನಾ ನಿರಂಜನ್, ಚಂದ್ರಕಲಾ ಸೇರಿದಂತೆ ಹಲವರಿದ್ದರು.