ಶಿವಮೊಗ್ಗ :ಜು 14, ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಅವಳಿ ಸಹೋದರರಾದ ಪುನೀತ್.ಎಸ್. ಮತ್ತು ಪವನ್.ಎಸ್.ಆಲ್ ಇಂಡಿಯಾ ರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭೆಗಳು.
ಈ ಪ್ರತಿಭಾನ್ವಿತರು 2025 – 26 ನೇ ಸಾಲಿನಲ್ಲಿ ಗೋವಾ ಮಾಪ್ಸಿಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಆಲ್ ಇಂಡಿಯಾ ರಾಷ್ಟ್ರೀಯ ರ್ಯಾಂಕಿಂಗ್ ನಲ್ಲಿ ರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂ

ಬೆಂಗಳೂರಿನ ಯಲಹಂಕ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಆಲ್ ಇಂಡಿಯಾ ರಾಷ್ಟ್ರೀಯ ಕ್ರೀಡಾ ಕೂಟವನ್ನು, ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ದೆಹಲಿ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಷಟಲ್ ಬ್ಯಾಡ್ಮಿಂಟನ್ ನಾಕ್ ಔಟ್ ಮಾದರಿಯ ಪಂದ್ಯಾವಳಿಯಲ್ಲಿ ಪ್ರತಿಭಾನ್ವಿತ ಅವಳಿ ಸಹೋದರರಾದ ಪುನೀತ್ ಎಸ್ ಮತ್ತು ಪವನ್ ಎಸ್ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ, ಫೈನಲ್ ಮೈಸೂರು ತಂಡದ ಜೊತೆ ಪಂದ್ಯಾಟದಲ್ಲಿ ಡಬಲ್ಸ್ ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ಹಾಗೂ ಬಿರುಸಿನ ಹೊಡೆತ ಮತ್ತು ಅಷ್ಟೇ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕವನ್ನು ಸಂಸ್ಥೆಯ ಮಡಿಲಿಗೆ ತಂದು ಕೊಟ್ಟಿರುತ್ತಾರೆ.

ಇದೇ ತಿಂಗಳು ಬೆಂಗಳೂರಿನಲ್ಲಿ ನಡೆದ 19 ವರ್ಷ ವಯೋಮಿತಿ ಒಳಗಿನ ಆಲ್ ಇಂಡಿಯಾ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿ ಡಬಲ್ಸ್ ನಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ, ಮೈಸೂರಿನ ಅಂತಿಮ ಪಂದ್ಯದ ಜೊತೆ ಅತ್ಯಾಕರ್ಷ ಆಟದ ಪ್ರದೇಶ ನೀಡಿ, ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.

ಈ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದಲ್ಲಿ ಬಾಗವಹಿಸಿ ಬಂಗಾರದ ಪದಕ ಪಡೆದು, ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ 17 ವರ್ಷದೊಳಗಿನ “ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

17 ವರ್ಷ ವಯೋಮಿತಿಯೊಳಗಿನ ಷಟಲ್ ರಾಷ್ಟ್ರೀಯ ರ್ಯಾಂಕಿಂಗ್ ನಲ್ಲಿ 1ನೇ ಸ್ಥಾನದಲ್ಲಿರುವುದು, 19 ವರ್ಷ ದೊಳಗಿನ ರಾಜ್ಯ ರ್ಯಾಂಕಿಂಗ್ ನಲ್ಲಿ 1 ನೇ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷ.
ಈ ಪ್ರತಿಭೆಗಳು ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರ ರಾಗಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಶ್ರೀ ಮಧುಸೂಧನ್ ಅವರ ಗರಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕ್ರೀಡೆಯ ಜೊತೆಗೆ ಓದಿನಲ್ಲೂ ಪ್ರತಿಭಾನ್ವಿತ ರಾಗಿರುತ್ತಾರೆ
ಈ ಕ್ರೀಡಾ ಪ್ರತಿಭೆಗಳು ರಾಷ್ಟ ಮತ್ತು ಅಂತರ್ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.