ಶಿವಮೊಗ್ಗ : ಸಿಮ್ಸ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಹೆಬ್ಬಾರ್ ಮೇಲೆ ಜಾತಿ ನಿಂದನೆ ಹಾಗೂ ಲೈಂಗಿಕ ಕಿರುಕುಳದ ಅರೋಪ ಕೇಳಿಬಂದಿತ್ತು . ಇವರ ತೊಂದರೆ ತಾಳಲಾರದೇ ವಿದ್ಯಾರ್ಥಿನಿಯು
ಠಾಣೆಯ ಮೆಟ್ಟಿಲೇರಿದ್ದಳು.

ಈ ವೈದ್ಯನ ಮೇಲೆ ಮಹಿಳಾ ಠಾಣೆಯಲ್ಲಿ ಎಫ್ ಐ ಆರ್ ಕೂಡ ದಾಖಲಾಗಿತ್ತು.
ಅದರೆ ಅವರು ಪೋಲಿಸರಿಗೆ ಚಳ್ಳೆಹಣ್ಣು
ತಿನ್ನಿಸಲು
ಕೆಲವು ದಿನ ನಾಪತ್ತೆಯಾಗಿದ್ದರು. ಈ ವೈದ್ಯನ ವಿರುದ್ದ
ಸಿಡಿದ್ದೆದ್ದ ಸಿಮ್ಸ್ ನ ವಿದ್ಯಾರ್ಥಿಗಳು ಅವರ ಬಂಧನಕ್ಕೆಹಾಗೂ ಅಮಾನತಿಗೆ
ಕಪ್ಪುಪಟ್ಟಿಧರಿಸಿ ಪ್ರತಿಭಟನೆಗಿಳಿದ್ದಿದ್ದರು.

ಹಾಗೂ ವಕೀಲರು ಸಹ ಅವರ ಬಂಧನಕ್ಕೆ
ಅಮಾನತಿಗೆ ಒತ್ತಾಯಿಸಿದ್ದರು.

ಈ ಹಿಂದೆಯೂ ಕೂಡ ಈ ವೈದ್ಯ ಇದೇ ರೀತಿ ಕಾಶ್ಮೀರದ ಓರ್ವ ವಿಧ್ಯಾರ್ಥಿನಿಗೂ ಲೈಂಗಿಕ ಕಿರುಕುಳ ನೀಡಿದ್ದರೆಂಬ ಎಂದು ಅರೋಪವು ಕೂಡ ಕೇಳಿಬಂದಿತ್ತು
ಈಗ ಅಶ್ವಿನ್ ರನ್ನು ಡಿವೈಎಸ್ ಪಿ ಬಾಬು ಅಂಜನಪ್ಪ ರವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.