ಶಿವಮೊಗ್ಗ, ಮೇ.26:
ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತೀರ್ಣ ವಾಗುತ್ತಿದ್ದು 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ 19 ಹಳ್ಳಿಗಳು ಶಿವಮೊಗ್ಗ ಪಾಲಿಕೆಗೆ ಸೇರುವ ಸಾಧ್ಯತೆಗಳು ನಿಚ್ಚಳವಾಗಿದ್ದು, ನಾಳೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹತ್ತರವಾದ ಸಭೆಯನ್ನು ಕರೆಯಲಾಗಿದೆ.
ಮೇ.27ರ ನಾಳೆ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಭಾಂಗಣದಲ್ಲಿ ಜಿಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಮಹತ್ತರ ಸಭೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಹಾಗೂ ಹೊಸದಾಗಿ ಸೇರ್ಪಡೆಯಾಗಲಿರುವ 9 ಗ್ರಾಂ ಪಂಗಳ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಭದ್ರಾವತಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಮತ್ತು ಶಿವಮೊಗ್ಗ ಪಂಚಾಯಿತಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ನಾಳೆ ಮಹತ್ತರವಾದ ಸಭೆ ನಡೆಯಲಿದೆ.

ಯಾವ್ಯಾವ ಸ್ಥಳಗಳು ಶಿವಮೊಗ್ಗ ಮಹಾನಗರ ಪಾಲಿಕೆಗೆ ಸೇರಿವೆ ಎಂಬುದನ್ನು ಅವಲೋಕಿಸಿದಾಗ ಕೋಟೆಗಂಗೂರು ಗ್ರಾಮ ಪಂಚಾಯಿತಿಯ ಕೋಟೆಗಂಗೂರು, ಅಬ್ಬಲಗೆರೆ ಪಂಚಾಯಿತಿಯ ಅಬ್ಲಲಗೆರೆ ಚನ್ನಮುಂಬಾಪುರ, ಮತ್ತೋಡು ಹಾಗೂ ಮೋಸಪ್ಪನ ಹೊಸೂರು ಗ್ರಾಮ ಶಿವಮೊಗ್ಗ ಪಾಲಿಕೆಗೆ ಸೇರಲಿವೆ.
ಮುದ್ದಿನ ಕೊಪ್ಪ ಗ್ರಾಮ ಪಂಚಾಯಿತಿಯ ವಿರುಪಿನಕೊಪ್ಪ ಹಾಗೂ ಶ್ರೀರಾಮಪುರ ಸೇರಲಿದ್ದು, ಮೇಲಿನ ಹನಸವಾಡಿ ಗ್ರಾಮ ಪಂಚಾಯಿತಿಯ ಗೋಂದಿ ಚೆಟ್ಳಳ್ಳಿ ಸೇರ್ಪಡೆ ಹೊಂದಲಿವೆ.

ನಿಧಿಗೆ ಗ್ರಾಪಂ ನ ದುಮ್ಮಳ್ಳಿ, ನಿಧಿಗೆ ಹಾಗೂ ಮಾಚೇನಹಳ್ಳಿ ಪಾಲಿಕೆಗೆ ಸೇರಲಿದ್ದು, ಪುರದಾಳು ಗ್ರಾಪಂನ ಗುಡ್ಡದ ಅರಕೆರೆ, ಅನುಪಿನಕಟ್ಟೆ, ಸಂತೆ ಕಡೂರು ಗ್ರಾಮ ಪಂಚಾಯಿತಿಯ ಸಂತೆ ಕಡೂರು, ರಾಮಪುರ ಗ್ರಾಮಗಳು ಸೇರ್ಪಡೆ ಹೊಂದಲಿವೆ.
ಹೊಸಳ್ಳಿ ಪಂಚಾಯತಿಯ ಹೊಸಳ್ಳಿ, ಅಗಸವಳ್ಳಿ ಪಂಚಾಯ್ತಿಯ ಗೋವಿಂದಪುರ ಹಾಗೂ ಕಲ್ಲೂರು ಗ್ರಾಮಗಳು ಸೇರ್ಪಡೆ ಹೊಂದಲಿವೆ.
ಈ ಮಹತ್ತರ ಸಭೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಒಂದು ಚೌಕಟ್ಟು ನಾಳೆ ಅನಾವರಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.