ದಿನದ ಹಿಂದೆ 20 ಜನರಲ್ಲಿ ಕಾಣಿಸಿಕೊಂಡ ಕೊರೋನ ನಿನ್ನೆಯ ವರದಿಯಲ್ಲಿನ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ 26 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 1941 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 1976 ಜನರಿಗೆ ನೆಗೆಟಿವ್ ಬಂದಿದೆ.


ಐವರು ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 62 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 30 ಜನ ಸೋಂಕಿನಿಂದ ದಾಖಲಾಗಿದ್ದಾರೆ. 52 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಒಟ್ಟು 144 ಜನ ಜಿಲ್ಲೆಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿ/ನಿಯರು ಮತ್ತು ಸಿಬ್ಬಂದಿಗಳನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. 618 ವಿದ್ಯಾರ್ಥಿ/ನಿಯರನ್ನ ಕೊರೋನ ಟೆಸ್ಟ್ ಗೆ ಒಳಪಡಿಸಲಾಗಿದ್ದು ಇದರಲ್ಲಿ 9 ಜನರಿಗೆ ಪಾಸಿಟಿವ್ ಬಂದಿದೆ. ಸಿಬ್ಬಂದಿಗಳಿಗೆ ಯಾರಿಗೂ ಕೊರೋನ ಪಾಸಿಟಿವ್ ಬಂದಿಲ್ಲ ಎಂದು ಬುಲಿಟಿನ್ ತಿಳಿಸಿದೆ.
ತಾಲೂಕವಾರು ಹೀಗಿದೆ


ಶಿವಮೊಗ್ಗ ತಾಲೂಕ ಮತ್ತು ನಗರದಲ್ಲಿ ಇಂದು 12 ಜನರಿಗೆ ಪಾಸಿಟಿವ್ ಬಂದಿದೆ. ಭದ್ರಾವತಿಯಲ್ಲಿ 1, ಶಿಕಾರಿಪುರದಲ್ಲಿ -2, ತೀರ್ಥಹಳ್ಳಿಯಲ್ಲಿ-1, ಸೊರಬ-7, ಹೊಸನಗರ-0, ಸಾಗರದಲ್ಲಿ -3 ಹೊರಜಿಲ್ಲೆಯಿಂದ ಬಂದ-3 ಜನರಿಗೆ ಕೊರೋನ ಪಾಸಿಟಿವ್ ಬಂದಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!