ಶಿವಮೊಗ್ಗ, ಏಪ್ರಿಲ್ 19 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಏ.19 ರಿಂದ 21 ರವರೆಗೆ ಜಿಲ್ಲಾ ಪ್ರವಾಸ ಕೈಗೊಂಡಿರುತ್ತಾರೆ.

ಏ. 19 ರಂದು ಬೆ.10.30ಕ್ಕೆ ಸೊರಬ ತಾ. ಬಿಳಾಗಿ ಗ್ರಾಮದ ಸ.ಕಿ.ಪ್ರಾ.ಶಾಲಾ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 11.30ಕ್ಕೆ ಕೋಟಿಪುರ ಸಂತ ಸೇವಾಲಾಲ್ರವರ 285ನೇ ಜಯಂತೋತ್ಸವ ಆನವಟ್ಟಿ ಶ್ರೀ ಸೇವಾಲಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಸಂಜೆ. 7.00ಕ್ಕೆ ಸೊರಬ ಹಿರೇಮಾಗಡಿಯ ಪೂಜ್ಯ ಶ್ರೀ ಮ.ನಿ.ಪ್ರ ಶಿವಮೂರ್ತಿ ಮಹಾಸ್ವಾಮಿಗಳ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದು ಸೊರಬದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಏ. 20 ರಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಏ. 21 ರಂದು ಬೆ. 10.30ಕ್ಕೆ ಹೊಸನಗರ ಈಡಿಗರ ಸಭಾಭವನದಲ್ಲಿ ಹೊಸನಗರ ತಾಲೂಕಿನ ಜನಸ್ಪಂದನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3.00ಕ್ಕೆ ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು ಕಾಲೇಜು ಕಟ್ಟಡ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಅಂದು ಸೊರಬದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.