ಶಿವಮೊಗ್ಗ, ಮಾ.18:
ಶಿವಮೊಗ್ಗ ಸಮೀಪದ ದೇವಕಾತಿಕೊಪ್ಪದಲ್ಲಿ ಮಧ್ಯರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬೆಲೆಬಾಳುವ ಬೈಕ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ದೇವಕಾತಿಕೊಪ್ಪದ ಚಂದ್ರ (ಕುಮಾರ್) ಎಂಬುವರ ಬೈಕ್ ಗೆ ಕಿಡಿಗೇಡಿ ವಿಕೃತ ಮನಸಿನ ವ್ಯಕ್ತಿ ಅಥವಾ ವ್ಯಕ್ತಿಗಳು ತೆಂಗಿನ ಗರಿಗಳ ಸಹಾಯದಿಂದ ಬೆಂಕಿ ಹಚ್ಚಿದ್ದಾರೆ. ಬೈಕ್ ಸಂಪೂರ್ಣ ಸುಟ್ಟುಹೋಗಿದೆ.
ಬೆಂಕಿ ಅವರ ತಗಡಿನ ಮನೆಗೂ ಹತ್ತಿದ್ದು ಕೂಡಲೇ ಮನೆಯವರು ಹಾಗೂ ಅಕ್ಕಪಕ್ಕದವರು ಬಂದು ಬೆಂಕಿ ನಂದಿಸಿದ್ದಾರೆ. ಇಲ್ಲದಿದ್ದರೆ ಬಾರೀ ಪ್ರಮಾಣದ ಅಘಾತವಾಗುವ ಸಂಭವವಿತ್ತು ಎನ್ನಲಾಗಿದೆ.
ಮನುಷ್ಯ ಅದೆಷ್ಟು ಕ್ರೂರಿಯಾಗಿರುತ್ತಾನೆ ನೋಡಿ. ನಾ ಬೈಕ್ ಕೊಳ್ಳಲಾಗಿಲ್ಲ ಎಂಬ ಹೊಟ್ಟೆಕಿಚ್ಚಿರಬಹುದು ಇಲ್ಲವೇ ಅವನಿಗೆ ಚಂದದ ಬೈಕ್ ಇದೆ ಎಂಬ ಕಿರಿಕ್ ಇರಬಹುದು. ದಿನದ ದುಡಿಮೆ ನಂಬಿ ಬೈಕ್ ಕೊಂಡಿದ್ದವರ ಬೈಕ್ ಗೆ ಬೆಂಕಿ ಹಚ್ಚಿ ವಿಕೃತತೆ ಮೆರೆದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸರಿಗೀಗ ವಿಕೃತ ಮನಸಿನ ಅಪರಾಧಿ ಹುಡುವ ಹೊಣೆಗಾರಿಕೆಯಿದೆ.



