ಶಿವಮೊಗ್ಗ, ಮಾ. 15:
ಶಿವಮೊಗ್ಗ ಜಿಲ್ಲೆಯ ಮೆಸ್ಕಾಂ ಇಲಾಖೆಯಿಂದ ಗಾಜನೂರು ಮೂಲಸ್ಥಾವರದಲ್ಲಿ ಮೀಟರಿಂಗ್ ಕ್ಯೂಬಿಕಲ್ ಬದಲಾವಣೆ ಮಾಡುವುದರಿಂದ ಗಾಜನೂರು ಮೂಲ ಸ್ಥಾವರದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುತ್ತಿದ್ದು, ದಿನಾಂಕ 16/03/2021 ಮತ್ತು 17/03/2021ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಿರ್ವಹಣೆ ಮತ್ತು ಪಾಲನೆಯ ಸಹಾಯಕ ಕಾರ್ಯಪಾಲಕ ಅಭಿಯಂತತರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ ಜಿಲ್ಲೆಯ ನಗರ ಉಪ ವಿಭಾಗ-2, ಘಟಕ -6ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾಮಗಾರಿ ಕೈಗೊಂಡಿರುವುರಿಂದ ದಿನಾಂಕ 17/03/2021 ರಂದು ಬೆಳಗ್ಗೆ 9:00ರಿಂದ ಸಂಜೆ 6:00ರ ವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾದಲಿದೆ.
ಕೋಟೆ ರಸ್ತೆ, ಅಪ್ಪಾಜಿ ರಾವ್ ಕಾಂಪೌಂಡ್, ಓ.ಬಿ.ಎಲ್ ರಸ್ತೆ, ಪೆನ್ಷನ್ ಮೊಹಲ್ಲಾ, ಬಿ.ಹೆಚ್ ರಸ್ತೆ, ಸೈನ್ಸ್ ಫೀಲ್ಡ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂನ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.



