ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಇನ್ನೋವೇಟರ್ ಯೂತ್ ಕ್ಲಬ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಾ.23 ರಂದು ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.

ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿದ್ದು 15 ರಿಂದ 29 ವರ್ಷದೊಳಗಿನವರು ಭಾಗವಹಿಸಬಹುದಾಗಿದೆ. ಗುಂಪು ವಿಭಾಗದಲ್ಲಿ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಖೋ-ಖೋ ಹಾಗೂ ವೈಯಕ್ತಿಕವ ವಿಭಾಗದಲ್ಲಿ

ಮಹಿಳೆಯರಿಗಾಗಿ 100 ಮೀ. ಓಟ ಮತ್ತು ಗುಂಡು ಎಸೆತ, ಪುರುಷರಿಗಾಗಿ ಬ್ಯಾಡ್ಮಿಂಟನ್, ಗುಂಡು ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆಸಕ್ತ ಸ್ಪರ್ಧಿಗಳು ಮಾ.21 ರೊಳಗೆ ತಮ್ಮ ಹೆಸರನ್ನು ಮೊಬೈಲ್ ಸಂಖ್ಯೆ : 9961332968 ಗೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಬೇಕು. ಹಾಗೂ ಮಾ.23 ರ ಬೆಳಿಗ್ಗೆ 9.30 ರೊಳಗೆ ಸ್ಥಳದಲ್ಲಿ ಹಾಜರಿರಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ತಿಳಿಸಿದ್ದಾರೆ.