ಶಿವಮೊಗ್ಗ ಫೆಬ್ರವರಿ.25 ಸಕ್ಕರೆಬೈಲು 10ನೇ ಮೈಲಿಗಲ್ಲು ತುಂಗಾನದಿಯ ಹಿನ್ನಿರಿನಲ್ಲಿ ತೇಲುತ್ತಿದ್ದ ಎರಡು ಪುರುಷರ ಶವಗಳು ಹಾಗೂ ಒಬ್ಬ ಮಹಿಳೆಯ ಶವ ಪತ್ತೆಯಾಗಿದ್ದು, ಹೆಸರು, ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ.
ಒಬ್ಬ ಗಂಡಸ್ಸಿನ ಚಹರೆವಯಸ್ಸು ಸುಮಾರು 38-40 ವರ್ಷ, ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಕಾಪಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಇನ್ನೊಬ್ಬ ಗಂಡಸ್ಸಿನ ಚಹರೆ ವಯಸ್ಸು ಸುಮಾರು 40-42 ವರ್ಷ, ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ನೀಲಿ, ತಿಳಿ ಕೆಂಪು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಮಹಿಳೆಯ ಚಹರೆ ವಯಸ್ಸು ಸುಮಾರು 40-45 ವರ್ಷ, ದುಂಡು ಮುಖ ಹೊಂದಿದ್ದು, ನೀಲಿ, ಹಸಿರು ಮತ್ತು ಕೆಂಪು ಬಣ್ಣದ ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಗಳ ವಾರಸ್ಸುದಾರರು ಪತ್ತೆಯಾದಲ್ಲಿ ತುಂಗಾನಗರ ಪೊಲೀಸ್ ಠಾಣೆ ದೂ.ಸಂ.: 9141289308/ 9480803370/ 9480803377 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
——————-