ಶಿವಮೊಗ್ಗ: ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಕಳೆದ 20 ವರ್ಷಗಳಿಗೂ ಮೇಲ್ಪಟ್ಟು ಕ್ರಯ, ಕರಾರು, ಜಿಪಿಎ ಪತ್ರಗಳ ಮೇಲೆ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗು ಬಿ- ಖಾತಾ ಮಾಡಿಕೊಡಬೇಕು ಎಂದು ನಾಗರಿಕರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.

ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಕಳೆದ 15 ವರ್ಷಗಳಿಂದ ನಗರಸಭೆಗೆ ಹಸ್ತಾಂತರವಾದ ಗಾಡಿ ಕೊಪ್ಪ, ಮಲವಗೊಪ್ಪ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳ ಸ್ವತ್ತುಗಳು ಸರ್ಕಾರದ ಗ್ರಾಮ ಠಾಣಾ ಸ್ವತ್ತುಗಳು ಕಂದಾಯ ಭೂಮಿಯ ಅಗ್ರಿಮೆಂಟ್ ಆಧಾರ ಪತ್ರ ಜಿಪಿಎ ಪತ್ರಗಳಲ್ಲಿನ ಹಂಚಿಕೆ ಮಾಡಿರುವ ಹಕ್ಕುಪತ್ರಗಳ ಮೇಲೆ ಮನೆಗಳು ನಿರ್ಮಾಣವಾಗಿರುತ್ತವೆ, ಸರ್ಕಾರಕ್ಕೆ ಇದರ ಮಾಹಿತಿ ನೀಡಿ ಈ ಎಲ್ಲ ಮನೆಗಳಿಗೂ ಬಿ ಖಾತ ಮಾಡಿಕೊಡಬೇಕೆಂದು ಮನವಿದಾರರು ತಿಳಿಸಿದರು.

ಸರ್ಕಾರ ಇ – ಖಾತಾ ಗೊಂದಲದ ಬಗ್ಗೆ ಕೆಲವು ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೆ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಸ್ವತ್ತು ಗಳಿಗೆ ಬೇಕಾದ ಇ -ಖಾತಾ ಮಾಡಿಕೊಡಲು ಸರ್ಕಾರ ಬೇಗನೆ ಅನುಷ್ಠಾನಕ್ಕೆ ತರಬೇಕು ಮತ್ತು ಆದಷ್ಟು ಬೇಗ ಕಂದಾಯ ಭೂಮಿಯಲ್ಲಿ ಮನೆಕೊಟ್ಟಿಕೊಂಡಿರುವ ನೋಂದಣಿ ಆಗಿರುವಂತಹ ಸ್ವತ್ತುಗಳಿಗೆ ಇ -ಖಾತಾ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಎನ್.ಕೆ. ಶ್ಯಾಮಸುಂದರ್, ಚಂದ್ರಶೇಖರ್, ರಮೇಶ್ ಹೆಚ್.ಕೆ., ವಿಜಯಕುಮಾರ್, ಕೋಡುಗದ್ದೆ ರವಿ, ಶಿವು ಸೇರಿದಂತೆ ಹಲವರಿದ್ದರು