ಪುಣೆ:
ನಗರದಾದ್ಯಂತ ಮತ್ತೆ ಕೊರೋನ ವೈರಸ್ ಹರಡಲು ಪ್ರಾರಂಭಿಸಿರುವುದರಿಂದ ಅಧಿಕಾರಿಗಳು ನಗರದಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದ್ದಾರೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಪುಣೆಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಯಾವುದೇ ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ತಿಳಿದು ಬಂದಿದೆ.
ಇದಲ್ಲದೆ, ಈ ತಿಂಗಳಾಂತ್ಯದ ತನಕ ಶಾಲೆ ಮತ್ತು ಕಾಲೇಜುಗಳು ಸಹ ಮುಚ್ಚಲ್ಪಡುತ್ತವೆ ಮತ್ತು ಸೋಮವಾರ ಹೊಸ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಪುಣೆ ವಿಭಾಗೀಯ ಆಯುಕ್ತರು ತಿಳಿಸಿದ್ದಾರೆ.