ಶಿವಮೊಗ್ಗ, ಫೆ.15:
ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಮಹಿಳೆಯ ಪೋಟೋವನ್ನು ಅಪ್ ಲೋಡ್ ಮಾಡಿ ಅಶ್ಲೀಲ ಮೆಸೇಜ್ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸಿ.ಇ.ಎನ್. ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಹಿಂದೆ ಮಹಿಳೆ ದೂರು ನೀಡಿದ್ದು ಸಿ.ಇ.ಎನ್ ಕ್ರೈಂ ಪೋಲಿಸ್ ಠಾಣೆ, ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ಗುರುರಾಜ್, ಪಿ.ಐ ಸಿ.ಇ.ಎನ್ ಕ್ರೈಂ ಪೋಲಿಸ್ ಠಾಣೆ, ಶಿವಮೊಗ್ಗ ಹಾಗೂ ಸಿಬ್ಬಂದಿಗಳಾದ ನಾಗರಾಜ್, ಕುಮಾರ್ ಬಣಕಾರ್ ಹಾಗೂ ಸಲ್ಮಾ ರವರುಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ,
ಫೆ.15ರಂದು ಆರೋಪಿ ಮೈಸೂರು ನಂದನಗೂಡಿನ ಸುಪ್ರೀತ್. ಎಸ್, (22) ಎಂಬಾತನನ್ನು ವಿಚಾರಣೆ ನಡೆಸಿ, ದಸ್ತಗಿರಿ ಮಾಡಿದೆ.
ಆರೋಪಿಯಿದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು ತಿಳಿಸಿರುತ್ತಾರೆ.