ಹಿಂದಿನ ಸುದ್ದಿ
ಹುಡುಕಾಟದ ವರದಿ-2
ಶಿವಮೊಗ್ಗ, ಜ.02:
ಶಿವಮೊಗ್ಗ ನಗರದಲ್ಲಿ ಅದೂ ಬಸ್ ಸ್ಠಾಂಡ್, ನ್ಯೂಮಂಡ್ಲಿ, ಆರ್ ಎಂ ಎಲ್ ನಗರ ಸೇರಿದಂತೆ ಬಹುತೇಕ ಕಡೆ ಓಸಿ ದಂಧೆ ಹೆಚ್ಚುತ್ತಿದೆ ಎಂಬ ಸಾರ್ವಜನಿಕ ಆರೋಪಗಳನ್ನು ಹೊತ್ತ ಸುದ್ದಿ ತುಂಗಾತರಂಗದಲ್ಲಿ ಪ್ರಕಟಗೊಂಡ ಮೇಲೆ ಕನಿಷ್ಟ ಕಾಳಜಿಯೆಂಬಂತೆ ಪೊಲೀಸರು ಒಂದಿಬ್ಬರನ್ನಾದರೂ ಹಿಡಿಯಬೇಕಿತ್ತು. ಇಲ್ಲವೇ ಎಲ್ಲೂ ಓಸಿ ದಂಧೆ ನಡೆಯುತ್ತಿಲ್ಲ ಎನ್ನಬೇಕಿತ್ತು, ಇಲ್ಲಿ ಅವರ ದಿವ್ಯ ನಿರ್ಲಕ್ಷ್ಯ ಹಾಗೂ ನಾನಾ ಅನುಮಾನಗಳನ್ನು ಹುಟ್ಟಿಸಿದೆ.
ಕಳೆದ ಡಿಸೆಂಬರ್ 30ರಂದು ನಿಮ್ಮ ತುಂಗಾತರಂಗ ದಿನಪತ್ರಿಕೆ ಸಾರ್ವಜನಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಓದುಗರ ಆರೋಪಗಳನ್ನು ಗಮನಿಸಿ ಪೊಲೀಸರು ಶ್ರಮವಹಿಸುತ್ತಿದ್ದರೂ ಸಹ ಒಸಿ ದಂಧೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮಿತಿಮೀರಿದ ವ್ಯವಹಾರ ನಡೆಯುತ್ತಿದೆ ಎಂದು ಆರೋಪ ಉಳ್ಳಂತಹ ವರದಿಯನ್ನು ಪ್ರಕಟಿಸಿತ್ತು.
ಪತ್ರಿಕೆ ಸುಖಾ ಸುಮ್ಮನೆ ಯಾವುದೋ ದುರಾಲೋಚನೆಯಿಂದ, ಯಾರದೋ ಮರ್ಜಿಗೆ ಬಲಿಯಾಗದೆ ತನ್ನದೇ ಚೌಕಟ್ಟಿನಲ್ಲಿ, ತನ್ನದೇ ವಿಶ್ವಾಸದಲ್ಲಿ ಓದುಗರ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಆದರೆ ಕನಿಷ್ಠ ವರದಿಯನ್ನು ಗಮನಿಸದ ಹಿನ್ನೆಲೆಯಲ್ಲಿ ಮತ್ತೆ ಸಾರ್ವಜನಿಕ ಆರೋಪಗಳನ್ನು ಹೊತ್ತ ಎರಡನೇ ವರದಿ ನಿಮ್ಮ ಮುಂದೆ ಇದೆ.
ಶಿವಮೊಗ್ಗ ಬಸ್ ನಿಲ್ದಾಣ ಸಮೀಪದ ಬಡಾವಣೆ ಒಂದರಲ್ಲಿನ ಓಸಿ ಬಿಡ್ಡರ್ ಓರ್ವವನ್ನು ಉಳಿಸುವ ಹಾಗೂ ಅವನನ್ನು ಬೆಳೆಸುವ ಕಾಯಕ ಸದ್ದಿಲ್ಲದೆ ನಡೆಯುತ್ತಿದೆಯಂತೆ. ಇದಕ್ಕೆ ಕೆಲ ಪ್ರಭಾವಿ ಹಾಗೂ ಯುವ ರಾಜಕಾರಣಿಗಳು ಬೆಂಗಾವಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದುರಂತವೆಂದರೆ ಇದೇ ಒಸಿ ಬಿಡ್ಡರ್ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆಯಿಂದ ಗಡಿಪಾರಿಗೆ ಶಿಫಾರಸ್ಸಾಗಿತ್ತು ಎಂಬ ವರದಿಯನ್ನು ಸಹ ತುಂಗಾ ತರಂಗ ಬರೆದಿದ್ದು ನೆಪ ಮಾತ್ರದ ಉದ್ದೇಶದಿಂದಲ್ಲ. ಆ ಗಡಿಪಾರಿನ ವಿಷಯ ಬದಿಗೆ ಇಟ್ಟು ಈಗ ಇಡೀ ಎಲ್ಲಾ ಎಲ್ಲಾ ಓಸಿ ಬಿಡ್ಡರ್ ಗಳನ್ನು ಮತ್ತೊಂದು ಕಡೆ ತಳ್ಳಿ ಈತನನ್ನೇ ಮುಖ್ಯ ವಾಹಿನಿಗೆ ಬರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಗಂಭೀರವಾದ ಆರೋಪ ವ್ಯಕ್ತವಾಗಿದೆ.
ಈಗಾಗಲೇ ಬಹಳಷ್ಟು ಜನ, ಎಲ್ಲ ರಂಗದವರು ಆತನ ಬಳಿ ದಿನ ಬೆಳಗಾದರೆ ನಿಲ್ಲುತ್ತಾರಂತೆ. ನಿತ್ಯ ಓಸಿ ಬರೆಯುವವರನ್ನು ಒಂದೆಡೆ ಕ್ರೂಡೀಕರಿಸಿ ಒಬ್ಬನ ಮೂಲಕ ದಂಧೆ ಮಾಡುವ ವ್ಯವಹಾರ ನಡೆಯುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯ ದಿಂದ ಕೇಳಿಬಂದಿದೆ.
ಇದರ ಸಂಪೂರ್ಣ ಸ್ಪಷ್ಟ ಮಾಹಿತಿಗಳು ಇನ್ನಷ್ಟು ಹುಡುಕಾಟಗಳ ನಂತರ ದೊರೆಯಲಿವೆ ಎಂಬುದಂತೂ ಸತ್ಯ. ಪೊಲೀಸರೇ ದಯಮಾಡಿ ಈಗಲಾದರೂ ಏಳಿ ಎದ್ದೇಳಿ ಜೂಜಿಗೆ ಕುಟುಂಬವನ್ನು ಕಳೆದುಕೊಳ್ಳುವವರನ್ನು ರಕ್ಷಿಸಿ ಎಂಬುದು ತುಂಗಾತರಂಗ ಹಾಗೂ ಸಾರ್ವಜನಿಕರ ಪ್ರೀತಿಯ ಮನವಿ. ಇನ್ನಷ್ಟು ನೇರಭಾಷೆಗಳು ಅನಿವಾರ್ಯ ಎನಿಸುತ್ತದೆ ಅಲ್ಲವೇ?