ಶಿವಮೊಗ್ಗ: ಶ್ರೀರಾಮ ಫೈನಾನ್ಸ್ ಹಲವು ಸಾಮಾಜಿಕ ಸೇವೆಗಳನ್ನು ನೀಡುತ್ತ ಬಂದಿದೆ ಎಂದು ಸಂಸ್ಥೆಯ ಡಿ.ಜಿ.ಎಂ. ಮೋಹನ್ಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮ್ ಫೈನಾನ್ಸ್ ಸಂಸ್ಥೆಯು ೧೯೭೪ರಲ್ಲಿ ಶ್ರೀರಾಮ್ ಚಿಟ್ಸ್ ಎಂಬ ಹೆಸರಿನಲ್ಲಿ ಸ್ಥಾಪಿತಗೊಂಡು ನಂತರ ವಿವಿಧ ಹೆಸರುಗಳಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸಿಗೊಂಡಿತ್ತು. ೨೦೨೨ರಲ್ಲಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಎಂಬುವುದಾಗಿ ಮರು ನಾಮಕಗೊಂಡು ತನ್ನ ವಹಿವಾಟನ್ನು ನಡೆಸುತ್ತ ಬಂದಿದೆ ಎಂದರು.
ಸಂಸ್ಥೆಯು ಭಾರತದಲ್ಲಿ ೩೧೫೦ ಶಾಖೆಗಳನ್ನು ಹೊಂದಿದೆ. ೭೫೮ ಗ್ರಾಮೀಣ ಕೇಂದ್ರಗಳಿವೆ. ಸುಮಾರು ೮೪ಲಕ್ಷ ಗ್ರಾಹಕರಿದ್ದಾರೆ. ೭೫ ಸಾವಿರ ಉದ್ಯೋಗಿಗಳಿದ್ದಾರೆ. ೨,೫೦,೦೦೦ಲಕ್ಷ ಕೋಟಿ ಆಸ್ತಿ ನಿರ್ವಹಣಾ ಮೌಲ್ಯವಿದೆ. ನಾನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಗ್ರ ಸ್ಥಾನ ಪಡೆದಿದೆ ಎಂದರು.
ಸಂಸ್ಥೆಯು ಸಾಮಾಜಿಕ ಸೇವೆಯನ್ನು ಕೂಡ ಮಾಡುತ್ತ ಬಂದಿದ್ದು, ೨೦೧೩ರಲ್ಲಿಯೇ ಶ್ರೀರಾಮ ಪೌಂಡೇಶನ್ ಎಂಬ ಚಾರಿಟಬಲ್ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ವಿದ್ಯಾರ್ಥಿ ವೇತನ, ಗಿಡಗಳನ್ನು ನೆಡುವುದು, ವೃದ್ಧಾಶ್ರಮಗಳನ್ನು ನಡೆಸುವುದು, ಕಿವುಡ ಮಕ್ಕಳಿಗೆ ಶಾಲೆ ನಡೆಸುತ್ತ ಇದೆ. ಮುಖ್ಯವಾಗಿ ಚಾಲಕರ ಮಕ್ಕಳಿಗಾಗಿ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ನೀಡುತ್ತಿದೆ. ಸುಮಾರು ೨ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗ ರಿಜನಲ್ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಇದಕ್ಕಾಗಿ ಸುಮಾರು ೪೦ ಲಕ್ಷ ಹಣವನ್ನು ತೆಗೆದಿರಿಸಲಾಗಿದೆ ಎಂದರು.
ಗ್ರಾಹಕರ ಅನುಕೂಲಕ್ಕಾಗಿ ಮತ್ತು ತಮ್ಮ ಸಂಸ್ಥೆಯ ವ್ಯವಹಾರಗಳನ್ನು ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ ಶಿವಮೊಗ್ಗದ ಬಳಿ ಮತ್ತೊಂದು ನೂತನ ಶಾಖೆಯನ್ನು ವಿನೋಬನಗರದ ಫ್ರೀಡಂ ಪಾರ್ಕ್ ಮುಂಭಾಗ ಮೋರ್ ಮಳಿಗೆಯ ಮೇಲೆ ಡಿ.೧೭ರ ಮಂಗಳವಾರ ತೆರೆಯಲಾಗುವುದು ಎಂದರು.
ಬಿ.ಹೆಚ್.ರಸ್ತೆಯಲ್ಲಿರುವ ಹಳೆಯ ಕಚೇರಿ ಕಾಸರವಳ್ಳಿ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಅಲ್ಲಿ ೧೦೦ ವಿದ್ಯಾರ್ಥಿಗಳಿಗೆ ಹಾಗೂ ವಿನೋಬನಗರದ ನೂತನ ಕಚೇರಿಯಲ್ಲಿ ೮೦ ಜನರಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಗಣೇಶ್ ಭಟ್, ಸುರೇಶ್, ಸೈಯ್ಯದ್ ಅಜಮಲ್ ಇದ್ದರು.