ಶಿವಮೊಗ್ಗ ಡಿ,13 : ಜಿಲ್ಲಾ ೧೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 6 ಮತ್ತು 7 ಸಾಹಿತ್ಯ ಗ್ರಾಮದಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಎರಡು ದಿನಗಳ ಸಮ್ಮೇಳನಕ್ಕೆ ನಾಲ್ಕು ಸಾವಿರ ಸಾಹಿತ್ಯ ಆಸಕ್ತರು, ಕಸಾಪ ಸದಸ್ಯರು, ಕನ್ನಡ ಮನಸ್ಸುಗಳನ್ನು ಪ್ರತಿನಿಧಿಗಳನ್ನಾಗಿ ನೋಂದಣಿ ಮಾಡಲು ತೀರ್ಮಾನ ಮಾಡಲಾಗಿದೆ. ಸಮ್ಮೇಳನ ನೆನಪಿಗೆ ಸ್ಮರಣ ಸಂಚಿಕೆ ಪ್ರಕಟಿಸಲು ತೀರ್ಮಾನ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ಸಮಿತಿಗಳು, ಹೋಬಳಿ ಸಮಿತಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ವಾಸವಿರುವ ಸಾಹಿತ್ಯ ಗಣ್ಯರು, ಹೊಸತಲೆಮಾರಿನ ಸಾಹಿತ್ಯ ಪ್ರತಿಭೆಗಳ, ಸಾಧಕರ ಮಾಹಿತಿ ಸಂಗ್ರಹಿಸಿ ಜಿಲ್ಲಾ ಸಮಿತಿ ಸಭೆಗೆ ಬರುವಾಗ ತರುವಂತೆ ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ. ಸಮ್ಮೇಳನದಲ್ಲಿ
ಯಾವ ಯಾವ ವಿಚಾರಗಳ ಕುರಿತು ಗೋಷ್ಠಿ ನಡೆಸಬೇಕು ಎಂಬುದರ ಚರ್ಚೆ ನಡೆಯಿತು. ಸಮ್ಮೇಳನ ಅಧ್ಯಕ್ಷರ ಆಯ್ಕೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚೆಮಾಡಲು ಡಿಸೆಂಬರ್ ೨೮ ರ ಸಂಜೆ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗುವುದು ಎಂದು ಡಿ. ಮಂಜುನಾಥ ವಿವರಿಸಿದ್ದಾರೆ.
ಸುಶೀಲಾ ಷಣ್ಮುಗಂ ಹಾಡು ಹೇಳಿದರು. ಕಸಾಪ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ ಸ್ವಾಗತಿಸಿದರು. ಹಿರಿಯ ಮುತ್ಸದ್ದಿ ಮಾನ್ಯ ಎಸ್ ಎಂ. ಕೃಷ್ಣ ಅವರ ಅಗಲಿಕೆಗೆ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯದರ್ಶಿ ಡಿ. ಗಣೇಶ್ ವಂದಿಸಿದರು.