ಡಿ.12: ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರರವರು ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆಯವರನ್ನು ಭೇಟಿ ಮಾಡಿ,
೧) ಶಿವಮೊಗ್ಗದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಹಿಂದೆ ಖೇಲೋ ಇಂಡಿಯಾ ಯೋಜನೆಯಡಿ ರೂ ೧೧.೮೩ ಕೋಟಿ ಅನುದಾನವನ್ನು ಒದಗಿಸಲಾಗಿದ್ದು, ಸದರಿ ಅನುದಾನವನ್ನು ಕಾರಣಾಂತರದಿಂದ ಹಿಂದಕ್ಕೆ ಪಡೆಯಲಾಗಿದ್ದು, ಸದರಿ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿ ಕೇಂದ್ರ ಸರ್ಕಾರದಿಂದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಶಿವಮೊಗ್ಗ ನಗರದಲ್ಲಿರುವ ಬಹು ಒಳಾಂಗಣ ಕ್ರೀಡಾ ವಿಭಾಗಗಳನ್ನು ಉತ್ತೇಜಿಸಲು ಹಾಗೂ ಒಳಾಂಗಣ ಕ್ರೀಡಾ ಸಭಾಂಗಣವು ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಅದನ್ನು ಪುನರುಜ್ಜೀವನಗೊಳಿಸಲು, ಮತ್ತು

೨) ಹೆಚ್ಚುವರಿಯಾಗಿ, ಖೇಲೋ ಇಂಡಿಯಾ ಯೋಜನೆಯಡಿ ಅಂತರರಾಷ್ಟ್ರೀಯ ಗುಣಮಟ್ಟದ ೨೦೦ ಮೀಟರ್ ಸಿಂಥೆಟಿಕ್ ಸ್ಕೇಟಿಂಗ್ ರಿಂಕ್ ಮಂಜೂರಾತಿಗೆ ಕೋರಿ,
೩) ಅದರ ಜೊತೆಯಲ್ಲಿ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ವಿಸ್ತರಣೆಯಲ್ಲಿರುವ ಕ್ರೀಡಾ ಸಂಕೀರ್ಣದ ಅಸ್ತಿತ್ವದಲ್ಲಿರುವ ಟೆನಿಸ್ ಅಂಕಣಕ್ಕೆ ಮೇಲ್ಛಾವಣಿ ಮಾಡುವ ಕುರಿತು ಚರ್ಚಿಸಿ ಸೂಕ್ತ ಅನುದಾನವನ್ನು ಒದಗಿಸುವಂತೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿದರು.
ಗೌರವಾನ್ವಿತ ಸಚಿವರು ಈ ಪ್ರಸ್ತಾವನೆಗಳಿಗೆ ಅವರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿ ಅನುಷ್ಠಾನ ಗೊಳಿಸುವ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸಂಪೂರ್ಣ ಬೆಂಬಲ ಮತ್ತು ಬದ್ಧತೆಯ ಭರವಸೆ ನೀಡಿ ಅನುದಾನವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಚರ್ಚೆಯು ಕ್ರೀಡಾಪಟುಗಳು ಮತ್ತು ಕ್ರೀಡಾ ಉತ್ಸಾಹಿಗಳಿಗೆ ಆಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯಗಳನ್ನು ಒದಗಿಸುವುದಾಗಿದೆ.
ಈ ನಿರ್ಣಾಯಕ ಯೋಜನೆಗಳಿಗೆ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರಿಗೆ ಹಾಗೂ ಕೇಂದ್ರ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆಯವರ ಅಚಲವಾದ ಗಮನ ಮತ್ತು ಕ್ರೀಡಾ ಕ್ಷೇತ್ರಕ್ಕೆ ಬೆಂಬಲ ನೀಡಿರುವ ಬಗ್ಗೆ ಸಂಸದರಾದ ಬಿ.ವೈ ರಾಘವೇಂದ್ರರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ ಹಾಗೂ ಶಿವಮೊಗ್ಗ ಕ್ಷೇತ್ರದ ಕ್ರೀಡಾ ಸ್ವರೂಪವನ್ನು ಬದಲಾಯಿಸುವ ಕ್ರಮವು ಬಹಳ ಆಶಾದಾಯಕವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಕ್ರೀಡಾಸಕ್ತರಿಗೆ ಒಳ್ಳೆಯ ಸಂತಸ ದಿನಗಳು ಬರಲಿದೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
\