ಶಿವಮೊಗ್ಗ,ಡಿ.೧೧:ಶರಾವತಿ ಮುಳುಗಡೆ ಸಂತ್ರಸ್ತರ.. ಧ್ವನಿಯಾಗಿ ಸಂಸತ್ತಿನಲ್ಲಿ ಇಂದು ಸಂಸದ ಬಿ.ವೈ. ರಾಘವೇಂದ್ರ ಕನ್ನಡದಲ್ಲೇ ಮಾತನಾಡಿ, ಗಮನಸೆಳೆದರು.
ಇಂದು ಸಂಸತ್ ಅಧಿವೇಶನದಲ್ಲಿ.. ಕನ್ನಡದಲ್ಲಿ ಮಾತು ಆರಂಭಿಸಿದ ಅವರು ಅನೇಕ ವರ್ಷಗಳ ಸಮಸ್ಯೆಯಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರ ವಿಷಯವನ್ನ ಪ್ರಸ್ತಾಪಿಸಿದರು.
ಸ್ವತಂತ್ರ ಬಂದು ೭೭ ವರ್ಷ ಆಯ್ತು ಸಂವಿಧಾನ ಬಂದು ೭೫ ವರ್ಷ ಆಯ್ತು ಆದರೆ ಈ ವಿಚಾರವಾಗಿ ಶರಾವತಿ ಜಲ ವಿದ್ಯುತ್ ಯೋಜನೆ ಸಂತಸ್ಥರ ಸಮಸ್ಯೆ ಇನ್ನೂ ಇದೆ.. ಈ ಸಮಸ್ಯೆ ೭೫ ವರ್ಷಗಳಿಂದಲೂ ಇದೆ.. ಶರಾವತಿ ಜಲ ವಿದ್ಯುತ್ ಯೋಜನೆ ೧೯೫೮.೬೪ ರ ನಡುವೆ
ನಿರ್ಮಾಣವಾಗಿತ್ತು. ೪ ರಿಂದ ೫ ಸಾವಿರ ರೈತ ಕುಟುಂಬಗಳ ಕೃಷಿ ಭೂಮಿ ಇದರಿಂದ ಮುಳುಗಡೆಯಾಗಿದೆ. ಈ ವಿದ್ಯುತ್ ಯೋಜನೆಯಿಂದ ಇಡೀ ದೇಶಕ್ಕೆ ವಿದ್ಯುತ್ ಕೊಡುವಂತಹ ಕೆಲಸ ಸಂತ್ರಸ್ಥರಿಂದಗಿದೆ. ಆದರೆ ಈಗಲೂ ಕೂಡ ಆ ಸಂತಸ್ತರಿಗೆ ನ್ಯಾಯ ಸಿಕ್ಕಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿ ಬರುವ ಮುಂಚೆ ಅವರಿಗೆ ಭೂಮಿಯನ್ನು ಕೊಡುವಂತಹ ಪ್ರಯತ್ನ ಹಿಂದಿನ ರಾಜ್ಯ ಸರ್ಕಾರಗಳು ಮಾಡಿಲ್ಲ ಎಂದು ಇನ್ನಿತರ ವಿಷಯವನ್ನು ಪ್ರಸ್ತಾಪಿಸಿದರು.