ವಿದ್ಯುತ್ ವ್ಯತ್ಯಯಶಿವಮೊಗ್ಗ: ಡಿಸೆಂಬರ್. 07;: ಶಿವಮೊಗ್ಗ ತಾಲ್ಲೂಕು, ಹೊಳಲೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ 66/11 ಕೆವಿ ವಿವಿ ಮಾರ್ಗದಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ
ಇರುವುದರಿಂದ ಡಿ.08 ಮತ್ತು ಡಿ. 09 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಹೊಳಲೂರು, ಹಾಡೋನಹಳ್ಳಿ,
ಹಳೆ/ಹೊಸ ಮಡಿಕೆಚೀಲೂರು, ಬಿ.ಕೆ. ತಾವರೆ ಗ್ರಾಮಗಳ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.