ಶಿವಮೊಗ್ಗ, ಸೆ.೧೯:
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆ ಸೀಳಬೇಕು ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಅನಿಲ್ ಬೋಂಡೆ, ನಾಲಿಗೆ ಕತ್ತರಿಸಿದವರಿಗೆ ೧೧ ಲಕ್ಷ ರೂ. ಬಹುಮಾನ ನೀಡುವೆ ಎಂದಿರುವ ಮಹಾ ರಾಷ್ಟ್ರದ ಶಿವಸೇನೆ ಪಕ್ಷದ ಶಾಸಕ ಸಂಜಯ್ ಗಾಯಕ್ ವಾಡ್
ಅವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಇಂದು ಪ್ರತಿಭಟನಾ ಮೆರವಣ ಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅನಿಲ್ ಬೋಂಡೆ ಮತ್ತು ಸಂಜಯ್ ಗಾಯಕ್ ವಾಡ್ ಅವರು ರಾಹುಲ್ ಗಾಂಧಿ ಅವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಉತ್ತರ ಬ್ಲಾಕ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್, ಪ್ರಮುಖರಾದ ಹೆಚ್.ಸಿ. ಯೋಗೀಶ್, ಕಲಗೋಡು ರತ್ನಾಕರ್, ಚಂದ್ರಭೂಪಾಲ್
, ರವಿಕುಮಾರ್, ಕಲೀಂ ಪಾಶ, ಎಸ್.ಟಿ. ಚಂದ್ರಶೇಖರ್, ಮಧುಸೂದನ್, ಚೇತನ್, ಯಮುನಾ ರಂಗೇಗೌಡ, ನಾಗರಾಜ್ ಕಂಕಾರಿ, ಶಿವಣ್ಣ, ಶಾಮೀರ್ ಖಾನ್, ಕವಿತಾ, ಸುವರ್ಣಾ ನಾಗರಾಜ್, ರೇಷ್ಮಾ, ಸೂಲಪ್ಪ, ಆರೀಫ್ ಉಲ್ಲಾ, ಗಾಡಿಕೊಪ್ಪ ರಾಜಣ್ಣ, ಭಾರತಿ ರಾಮಕೃಷ್ಣ ಮೊದಲಾದವರಿದ್ದರು.