ಶಿವಮೊಗ್ಗ : ಇಲ್ಲಿಗೆ ಸಮೀಪದ ಹೊಸೂಡಿ ಗ್ರಾಮ ಪಂಚಾಯತಿಯಲ್ಲಿ  ನೀರಗಂಟಿ ಮತ್ತು ವ್ಯಕ್ತಿಯೋರ್ವನ ನಡುವೆ ಮಾರಾಮಾರಿ  ನಡೆದ ಘಟನೆ ನಡೆದಿದೆ. 

ಈ ಘಟನೆ ಕುರಿತ ವೀಡಿಯೋ ಒಂದು ವೈರಲ್ ಆಗಿದ್ದು ಗ್ರಾಮ ಸೌಧದಂತ ಪವಿತ್ರ ಸ್ಥಳದಲ್ಲಿ ಇಂಥಹ ದುರ್ಘಟನೆ ನಡೆಯಬಾರದಿತ್ತು ಎಂಬ ಮಾತು ಕೇಳಿಬರುತ್ತಿದೆ. ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಎದುರೇ ಈ ಮಾರಾ ಮಾರಿ ನಡೆದಿದೆ.

ಪಿಡಿಒ ಮಂಜಮ್ಮ ಮತ್ತು ನೀರಗಂಟಿ ಹನುಮಂತಪ್ಪ ಅವರು ಪರಸ್ಪರ ಏರಿದ ಧ್ವನಿಯಲ್ಲಿ ಮಾತನಾಡುತ್ತಿರುವುದು ಕೇಳಿಬಂದಿದೆ. ಇದೇ ಸಂದರ್ಭದಲ್ಲಿ  ಗ್ರಾ.ಪಂ.ನ ಚಿಕ್ಕ ಮರಡಿಯ ನೀರಗಂಟಿ ಹನುಮಂತಪ್ಪ ಎಂಬುವರ ಮೇಲೆ ಅಲ್ಲಿಯೇ ಆಸೀನರಾಗಿದ್ದ ಗ್ರಾಮಸ್ಥ ಅಜರ್ ಎಂಬಾತ ತಾನು ಕುಳಿತ್ತಿದ್ದ ಖುರ್ಚಿಯನ್ನೇ ನೀರ ಗಂಟಿಯ ಮೇಲೆ  ಎಸೆದು ಹಲ್ಲೆ ಮಾಡಿದ್ದಾರೆ. 

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ಥಳಕ್ಕೆ police ಸ್ ಅಧಿಕಾರಿಗಳಾದ ಸತ್ಯನಾರಾಯಣ, ಸಿಬ್ಬಂದಿ ಕಲ್ಲನಗೌಡ ಧಾವಿಸಿ ತನಿಖೆ ಕೈಗೊಂಡಿದ್ದಾರೆ. 

ಸಮಗ್ರ ತನಿಖೆಯ ನಂತರವೇ ಈ ದುರ್ಘಟನೆಗೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!