ಶಿವಮೊಗ್ಗ: ಟ್ರಾಫಿಕ್ ಪೊಲೀಸರಿಂದ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವಂತೆ ಸವಾರ್ ಲೈನ್ ರಸ್ತೆ ಹಾಗೂ ಗಾರ್ಡನ್ ಏರಿಯಾ ರಸ್ತೆಯ ವ್ಯಾಪಾರಸ್ಥರು ಹೆಚ್ಚುವರಿ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಟ್ರಾಫಿಕ್ ಪೊಲೀಸರಿಂದ ಎಲ್.ಎಲ್.ಆರ್. ರಸ್ತೆಯ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ವಾಹನಗಳನ್ನು ಗ್ರಾಹಕರು ಪಾರ್ಕಿಂಗ್ ಮಾಡುವ ವೇಳೆಯಲ್ಲಿ ಟ್ರಾಫಿಕ್ ಪೊಲೀಸರಿಂದ
ತೀವ್ರ ಕಿರುಕುಳ ಅನುಭವಿಸುತ್ತಿದ್ದಾರೆ. ಇದರಿಂದ ಗ್ರಾಹಕರು ವ್ಯಾಪಾರಕ್ಕೆ ಬರುವವರು ವಾಪಸ್ ಹೋಗುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಹಕರು ಅಂಗಡಿಗೆ ಬರದೇ ಹೋದರೆ ಬಾಡಿಗೆ, ಕೆಲಸಗಾರರ ಸಂಬಳ, ವಿದ್ಯುತ್ ಬಿಲ್ ಇತರೆ ಖರ್ಚುಗಳನ್ನು ತೂಗಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಅಂಗಡಿಗೆ ಬರುವ ಮಾಲುಗಳನ್ನು ಇಳಿಸಲು ಮತ್ತು ಗ್ರಾಹಕರಿಗೆ ಪ್ಯಾಕ್ ಮಾಡಿಕೊಡಲು ಕಷ್ಟವಾಗುತ್ತಿದೆ. ಬೆಳಗ್ಗೆಯಿಂದ ಸಮಝೆವರೆಗೆ ಪೊಲೀಸರು ಇಲ್ಲೇ ಗಸ್ತು ತಿರುಗುತ್ತಿರುತ್ತಾರೆ. ಇದನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪಾಕಿಂಗ್ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಈ ರಸ್ತೆಯ ಕ್ರಾಸ್ ನಲ್ಲಿರುವ ರೋಡ್ ನಲ್ಲಿ ಆಸ್ಪತ್ರೆಗಳಿಂದಲೂ ಸಹ ತೊಂದರೆಯಾಗುತ್ತಿದೆ. ಆಸ್ಪತ್ರೆಗಾಗಿ ಬರುವ ಒಳ ರೋಗಿಗಳು, ಹೊರ ರೋಗಿಗಳು, ಸಂಬಂಧಿಕರನ್ನು ನೋಡಲು ಬರುವವರಿಂದಾಗಿ ಪಾರ್ಕಿಂಗ್ ವ್ಯವಸ್ಥೆಯಲ್ಲೂ ತೊಂದರೆಯಾಗಿದ್ದು, ಈ ಎಲ್ಲಾ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.