ಬೆಂಗಳೂರು,ಆ.21 : ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು
, ಹಲವಾರು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ.
ಇತ್ತ ರೈತರಿಗೆ ಈ ಮಳೆಯ ಕಾರಣದಿಂದ ನಷ್ಟಗಳು ಕೊಡ ಸಂಭವಿಸಲಿದೆ. ಮತ್ತೆ ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ. ಎಂದು ಭವಿಷ್ಯ ನುಡದಿದ್ದಾರೆ.
ಈ ವರ್ಷ ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿ ಆಗಿ ಬರಗಾಲ ಅನುಭವಿಸುತ್ತದೆ.
ಕರ್ನಾಟಕ ಸಮಸ್ಯೆ ಯಿಂದ ತಪ್ಪಿಸಿಕೊಳ್ಳಲು ಅಧಿಕಾರದಲ್ಲಿ ಇರುವವರು ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಈ ಎಲ್ಲಾ ಸಮಸ್ಯೆ ಯಿಂದ ಪಾರಾಗಬಹುದು ಎಂದು ಹೇಳಿದ್ದಾರೆ.