ಶಿವಮೊಗ್ಗ, ಜುಲೈ ೧೬: ): ಜರ್ಮನಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೇ|| ಟ್ಯಾಲೆಂಟ್ ಆರಂಜ್ ಸಂಸ್ಥೆಯು ಭಾರತ ದೇಶದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿಎಸ್ಸಿ/ಜಿಎನ್‌ಎಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗವನ್ನು ಕಲ್ಪಿಸಲು ಮುಂದೆ ಬಂದಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.


ಮೇ|| ಟ್ಯಾಲೆಂಟ್ ಆರಂಜ್ ಸಂಸ್ಥೆಯು ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸಂಪರ್ಕಿಸಿರುವ ಹಿನ್ನೆಲೆಯಲ್ಲಿ ಸೂಕ್ತ ವಿದ್ಯಾರ್ಹತೆ ಹೊಂದಿರುವ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆ

ಮಾಡಿ ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ ೮ ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಿಲಿದೆ. ಈ ಸಂದರ್ಭದಲ್ಲಿ ಉಚಿತ ಊಟ, ವಸತಿ ಸೌಲಭ್ಯ ನೀಡುವುದರ ಜೊತೆ ಪ್ರಯಾಣ ವ್ಯವಸ್ಥೆಯನ್ನು ಒದಗಿಸುತ್ತಿದೆ.


ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತೀಯ ನರ್ಸಿಂಗ್ ಲೈಸೆನ್ಸ್ ಹೊಂದಿದ್ದು, ಹೊಸಬರು/ ಅನುಭವವುಳ್ಳ ೩೮ ವರ್ಷದೊಳಗಿನ ಮಹಿಳೆಯರು/ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ. ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯುವ ಅವಕಾಶವಿರುವುದಿಲ್ಲ.

By admin

ನಿಮ್ಮದೊಂದು ಉತ್ತರ

error: Content is protected !!