ಓದುಗರ ಪತ್ರ -1
ಶಿವಮೊಗ್ಗದ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಗೆ ಅದೇಕೊ ಲಷ್ಕರ್ ಮೊಹಲ್ಲಾದ ಮೂರನೇ ಕ್ರಾಸ್ ಮುಖ್ಯ ರಸ್ತೆಯ ಮೆಹರಾಜ್ ಮಸೀದಿ ಎದುರುಗೆಯೆ ಕಾಣುವಂತಹ ಚರಂಡಿಯ ಬಗ್ಗೆ ಚಿಂತೆ ಇಲ್ಲ.
ಜನರಿಗೆ ಆತಂಕ ತರುವ ಈ ವಿಷಯದ ಬಗ್ಗೆ ಪಾಲಿಕೆಯ ಗಮನಕ್ಕೆ ತಂದರೂ ಸಹ ಬೇಜವಾಬ್ದಾರಿತನವನ್ನು ತೋರಿದ್ದು ಈ ದುರಸ್ತಿ ಚರಂಡಿಯು ಇಲ್ಲಿನ ಮಕ್ಕಳ, ವೃದ್ದರ ಪಾಲಿಗೆ ದೊಡ್ಡ ಅಪಾಯ ತರುವ ಕಂದಕವಾಗಿದೆ.
ಇಲ್ಲಿನ ಸಾರ್ವಜನಿಕರು ಅದೆಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೋರಿದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಮುಂದೆ ಆಗುವ ಅನಾಹುತಕ್ಕೆ ಅವರೇ ಕಾರಣ? ಮಲಗಿರುವ ಅವರನ್ನು ಎಬ್ಬಿಸಲು ಹೋರಾಟವೇ ಮಾಡಬೇಕೇ..?
ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ತಿಳಿದು ಈ ಸಮಸ್ಯೆಗೆ ಪರಿಹಾರ ಮಾಡಬೇಕೆಂಬುದು ಸ್ಥಳೀಯರ ಕೊನೆಯ ಹಂತದ ಒತ್ತಾಯ
-ಎಸ್.ಎ. ಸಿದ್ದೀಕ್ (ಮುನ್ಸಿಪಾಲಿಟಿ), ಸಮಾಜ ಸೇವಕರು, ಶಿವಮೊಗ್ಗ