ಶಿವಮೊಗ್ಗ,ಜು.೦2: ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೇಷನಲ್ ಹಾಲ್ ಮುಂಭಾಗದಲ್ಲಿ ಮತ್ತು ಕುವೆಂಪು ನಗರದಲ್ಲಿ ನಿನ್ನೆ ರಾತ್ರಿ ಚಿರತೆ ಕಂಡುಬಂದಿದ್ದ ಚಿರತೆಯ ಸಂಪೂರ್ಣ ಡಿಟೈಲ್ಸ್ ಸಿಕ್ಕಿದೆ.
ಸ್ಥಳೀಯರೊಬ್ಬರ ಮನೆಯ ಸಿಸಿ ಕ್ಯಾಮರಾದಲ್ಲಿ 2-3 ಬಾರಿ ಚಿರತೆ ಓಡಾಡುವ ದೃಶ್ಯ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ರಾಗಿಗುಡ್ಡ, ಕುವೆಂಪು ನಗರ ಕೊನೆಯ ಭಾಗ, ಜೆಎನ್ಸಿ ಬಳಿ ತಂಬಾಕು ಗೋಡನ್
ಬಳಿ, ಚೆನ್ನಮುಂಬಾಪುರದ ಬಳಿ ಮತ್ತು ಬಾಪೂಜಿ ಆರ್ಯುವೇದಿಕ್ ಕಾಲೇಜು ಹಿಂಭಾಗ ಚಿರತೆ ಓಡಾಡುವುದನ್ನು ಸ್ಥಳೀಯರು ನೋಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, 3 ತಿಂಗಳ ಹಿಂದೆ ಕೂಡ ಇದೇ ರೀತಿ ಚಿರತೆ ಓಡಾಟದ
ವೀಡಿಯೋ ವೈರಲ್ ಆಗಿತ್ತು. ಈಗ ಮತ್ತೆ ಚಿರತೆ ಕಂಡು ಬಂದಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರೀಕರು ಒತ್ತಾಯಿಸಿದ್ದಾರೆ.