ಸಾಗರ : ಇಲ್ಲಿನ ಸೊರಬ ರಸ್ತೆಯ ದುರ್ಗಾಂಬಾ ವೃತ್ತದಲ್ಲಿ ಬೈಕ್ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.


ವೆಂಕಟೇಶ್ ಕಾಮತ್ ಎಂಬುವವರು ಬೈಕ್‌ನಲ್ಲಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡಿರುವ ವೆಂಕಟೇಶ್ ಕಾಮತ್ ಅವರನ್ನು ಉಪ ವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.


ಹಂಪ್ ಹಾಕಲು ಒತ್ತಾಯ : ದುರ್ಗಾಂಬಾ ವೃತ್ತಕ್ಕೆ ನಾಲ್ಕು ರಸ್ತೆಗಳು ಸೇರುತ್ತಿದ್ದು ಪ್ರತಿದಿನ ಅಪಘಾತಗಳ ನಡೆಯುತ್ತಿದೆ. ಪೇಟೆ ಮಧ್ಯೆ ಇರುವುದರಿಂದ ವಿಪರೀತ ವಾಹನ ಹಾಗೂ ಜನದಟ್ಟಣೆ ಇರುತ್ತದೆ

. ನಾಲ್ಕು ರಸ್ತೆಯ ಆರಂಭದಲ್ಲಿ ಹಂಪ್ ಹಾಕುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಸತೀಶ್ ಬಾಬು ಒತ್ತಾಯಿಸಿದ್ದಾರೆ.
ಪದೇಪದೇ ಈ ವೃತ್ತದಲ್ಲಿ ಅಪಘಾತವಾಗುತ್ತಿರುವುದನ್ನು ಗಮನಿಸಿ ರಸ್ತೆಗಳಿಗೆ

ಹಂಪ್ ಹಾಕುವ ಮೂಲಕ ಅಪಘಾತ ತಪ್ಪಿಸಲು ಹಿಂದೆಯೆ ನಗರಸಭೆಗೆ ಮನವಿ ಮಾಡಲಾಗಿತ್ತು. ಈತನಕ ಹಂಪ್‌ಗಳನ್ನು ಹಾಕಿಲ್ಲ.

ಈ ವೃತ್ತದಲ್ಲಿ ಪ್ರತಿದಿನ ಅಪಘಾತಗಳು ನಡೆಯುತ್ತಿದ್ದು ತಕ್ಷಣ ನಗರಸಭೆ ನಾಲ್ಕು ರಸ್ತೆಗಳ ಆರಂಭದಲ್ಲಿ ಹಂಪ್ ಹಾಕುವ ಮೂಲಕ ಸಾವುನೋವು ಆಗುವುದನ್ನು ತಡೆಯಬೇಕು ಎಂದು ಸತೀಶ್ ಬಾಬು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!