ಶಿವಮೊಗ್ಗ: ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಲು ಯುವಜನತೆ ಸಂಕಲ್ಪ ತೊಡಬೇಕಾಗಿದೆ. ಆಧ್ಯಾತ್ಮಿಕತೆಯ ಮೂಲಕ ಯುವಶಕ್ತಿಯು ಸಕಾರಾತ್ಮಕ ಆಲೋಚನೆಯನ್ನು ಮೈಗೂಡಿಸಿಕೊಂಡು ಸದೃಢ ಭಾರತವನ್ನು ಕಟ್ಟಬೇಕು. ಯುವಶಕ್ತಿ ಒಗ್ಗೂಡಿದರೆ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಗದಗ-ವಿಜಯಪುರ ರಾಮಕೃ? ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪ.ಪೂ. ಶ್ರೀ ನಿರ್ಭಯಾನಂದ ಸರಸ್ವತಿ ಮಹಾರಾಜ್ ಅವರು ಹೇಳಿದರು.

ಶ್ರೀ ರಾಮಕೃ? ವಿವೇಕಾನಂದ ಆಶ್ರಮದ ವತಿಯಿಂದ ಜೂ.೨೦ರ ಇಂದಿನಿಂದ ಮೂರು ದಿನ ಇಲ್ಲಿನ ಶ್ರೀ ರಾಮಕೃ? ವಿವೇಕಾನಂದ ಆಶ್ರಮದ ೧೯ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಯುವ ಸಮ್ಮೇಳನ ಹಾಗೂ ವಿಶೇ? ಉಪನ್ಯಾಸ ಕಾರ್ಯಕ್ರಮವನ್ನು ಕಲ್ಲಗಂಗೂರಿನಲ್ಲಿರುವ ಆಶ್ರಮದ ಪ್ರಾರ್ಥನಾ ಮಂದಿರದಲ್ಲಿಂದು ಉದ್ಘಾಟಿಸಿ ಅವರು ಮಾತನಾಡಿದರು.

ಭವ್ಯ ಭಾರತದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ದೇಶದ ಭವಿಷ್ಯ ಯುವಜನತೆಯನ್ನು ಅವಲಂಬಿಸಿದೆ. ಯುವಶಕ್ತಿಯ ಸದ್ಭಳಕೆಯಿಂದ ಬಲಿಷ್ಠ, ಸದೃಢ, ಸುಸಂಸ್ಕೃತ ಹಾಗೂ ಶಕ್ತಿಶಾಲಿ ರಾಷ್ಟ್ರನಿರ್ಮಾಣ ಸಾಧ್ಯ. ಆದ್ದರಿಂದ ಯುವಕರು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರಂತಹ ದಾರ್ಶನಿಕರು, ತತ್ವಜ್ಞಾನಿಗಳ ತತ್ವ-ಸಿದ್ಧಾಂತವನ್ನು ಪರಿಪಾಲಿಸಬೇಕೆಂದು ಕರೆ ನೀಡಿದರು.

ದಿವ್ಯ ಉಪಸ್ಥಿತಿ ವಹಿಸಿದ್ದ ಇಲ್ಲಿನ ಶ್ರೀ ರಾಮಕೃ? ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ವಿನಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಆಧ್ಯಾತ್ಮ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತಿರುವ ಶ್ರೀ ರಾಮಕೃ? ವಿವೇಕಾನಂದ ಆಶ್ರಮವು ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ ಎಂದು ತಿಳಿಸಿದರು.

ವಿಶೇ? ಆಹ್ವಾನಿತರಾಗಿ ಆಗಮಿಸಿದ್ದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತಂದ ಕ್ಯಾ.ನವೀನ್ ನಾಗಪ್ಪ ಅವರು ಕಾರ್ಗಿಲೆ ಯುದ್ಧದ ರೋಚಕ ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿ, ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ಹದಿಹರೆಯದಲ್ಲಿ ಮನಸ್ಸು ಯಾವುದನ್ನು ಸ್ವೀಕರಿಸಬೇಕು, ಯಾವುದು ಬೇಡ ಎಂಬ ಗೊಂದಲ ಸಹಜ. ಆದರೆ ಗುರು- ಹಿರಿಯರು ಹೇಳುವ ಒಳ್ಳೆಯ ಮಾತುಗಳನ್ನು ಕೇಳಿ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಸಾಧಕರು, ಸತ್ಪಜ್ರೆಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ ಎಂದು ಕಿವಿ ಮಾತು ಹೇಳಿದರು.

ವೇದಿಕೆಯಲ್ಲಿ ಡಾ. ಚಿಕ್ಕಸ್ವಾಮಿ ಉಪಸ್ಥಿತರಿದ್ದರು. ರಾಣೇಬೆನ್ನೂರು ಆಶ್ರಮದ ಪ್ರಕಾಶಾನಂದಜೀ ಮಹಾರಾಜ್, ಸಾಗರ ಆಶ್ರಮದ ಜ್ಞಾನಾನಂದಜಿ ಮಹಾರಾಜ್, ಡಾ. ಗುರುದತ್, ಎಂ.ಎನ್. ಸುಂದರರಾಜ್, ಕೆ.ವಿ. ವಸಂತ ಕುಮಾರ್, ಆರ್. ಶ್ರೀಕಾಂತ್, ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ ಕಾರ್ಯದರ್ಶಿ ಪರಮೇಶ್ವರ ಭಟ್ ಮತ್ತಿತರರು ಭಾಗವಹಿಸಿದ್ದರು.
ಆನಂದ್ ಪ್ರಾರ್ಥಿಸಿ, ವಿಶ್ವೇಶ್ವರಾಚಾರ್ ಸ್ವಾಗತಿಸಿ, ಡಾ. ಗುರುದತ್ ನಿರೂಪಿಸಿ, ಆರ್. ಶ್ರೀಕಾಂತ್ ವಂದಿಸಿದರು.