ಶಿವಮೊಗ್ಗ: ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇಂದು ಅಂತರರಾಷ್ಟ್ರೀಯ ಆಟದ ದಿನ ಅಂಗವಾಗಿ ನಡೆದ ಆಟೋಟ, ಸ್ಪರ್ಧೆಯಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯಿತಿಯ

ಏಳು ಗ್ರಾಮಗಳ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.

ಅಬ್ಬಲಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ದೇವಮ್ಮ ಜೆ. ವಿಜಯ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಹಾಗೂ ಸದಸ್ಯರಾದ ಕೆ. ಹ? ಭೋವಿ, ನಾಗರಾಜಯ್ಯ, ಸುನಿತಾ ವಿ., ಶ್ರೀನಿವಾಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಪ್ಪ ಹೆಚ್.

, ಗ್ರಾಮ ಪಂಚಾಯತ್ ಗ್ರೇಡ್ ೧ ಕಾರ್ಯದರ್ಶಿ ಶಿವನಾಯ್ಕ ಕೆ. ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಜರಿದ್ದರು.


ಹೊರಾಂಗಣ ಆಟ ವಾಲಿಬಾಲ್ ಹಾಗೂ ಒಳಾಂಗಣ ಆಟ ಕೇರಂ, ಚೆಸ್ ಆಟಗಳನ್ನು ಆಡಿಸಲಾಯಿತು. ಅಂತರಾಷ್ಟ್ರೀಯ ಆಟದ ದಿನ ಅಂಗವಾಗಿ ೧೮ ವ? ಒಳಗಿನ ಎಲ್ಲಾ ಶಾಲೆಯ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ

ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮದ ಹಾಗೂ ಸ್ವಯಂ ಮೌಲ್ಯ ಆತ್ಮವಿಶ್ವಾಸ ಸೃಜನಶೀಲತೆ ಸಮ್ಮತಿ ಶಾಂತಿ ಸಾಮಾಜಿಕ ಸಾಮರ್ಥ್ಯ ಲಿಂಗ ತಾರತಮ್ಯ ಇವೆಲ್ಲ ತೊಡೆದು ಹಾಕುವುದು ಇಂದಿನ ವಿಶೇ?ತೆಗಳಾಗಿತ್ತು.