ಶಿವಮೊಗ್ಗ, ಜೂ. 06: ಹೊಳಲೂರು ಶಾಖಾ ವ್ಯಾಪ್ತಿಯಲ್ಲಿ 66/11 ಕೆವಿ ವಿ.ವಿ ಕೇಂದ್ರದಲ್ಲಿ ಎಫ್-7,8 ಮತ್ತು 10 ಮಾರ್ಗಗಳಲ್ಲಿ ಲಿಂಕ್ಲೈನ್ ಮಾರ್ಗ ರಚಿಸುವ ಕಾಮಗಾರಿ
ಹಮ್ಮಿಕೊಂಡಿರುವುದರಿಂದ ಜೂನ್ 07 ಮತ್ತು 08 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು ಮತ್ತು
ಬಿ.ಕೆ.ತಾವರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.