ಶಿವಮೊಗ್ಗ: ಇಂದು ವಿನೋಬನಗರದ ಸ್ನೇಹಜೀವಿ ಗೆಳೆಯರ ಬಳಗ, ಜಯನಗರ ಪೊಲೀಸ್ ಠಾಣೆ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಶಿವಮೊಗ್ಗ ಇವರ ಆಶ್ರಯದಲ್ಲಿ

ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿದ್ಧನಗೌಡ ಅವರ ಮಾರ್ಗದರ್ಶನದಲ್ಲಿ ನಗರದ ಲಕ್ಷ್ಮಿ ಟಾಕೀಸ್ ವೃತ್ತದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಇತ್ತೀಚಿಗೆ ಹೈಕೋರ್ಟ್ ನ ಆದೇಶದಂತೆ 9 ತಿಂಗಳ ಮೇಲ್ಪಟ್ಟ ಮಕ್ಕಳು ಸೇರಿದಂತೆ ಹಿಂಬದಿಯ ಸವಾರರು ಸಹ ಹೆಲ್ಮೆಟ್ ಧರಿಸಬೇಕು ಎಂಬ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. 

ಈ ಸಂದರ್ಭದಲ್ಲಿ ಪಿಎಸ್ಐ ಶಕುಂತಲಾ ಮಂಜುನಾಥ್, ಪಶ್ಚಿಮ

ಸಂಚಾರ ಎಸ್ಐ ಬಿ.ಸಿ. ಮುದುಕಮ್ಮನರ್, ಪಿಎಸ್ಐ ತಿರುಮಲೇಶ್, ಸ್ನೇಹಜೀವಿ ಗೆಳೆಯರ ಬಳಗದ ಶರತ್, ಶಿವಮೂರ್ತಿ, ಗಿರೀಶ್, ಸಂತೋಷ್, ಶಿವಮೊಗ್ಗ ವಿನೋದ್, ಶಿವಶರಣ, ಸವಿತಾ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!