ಶಿವಮೊಗ್ಗ,ಜ.13;
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ ಟಿ) ಸೇರಿಸಬೇಕೆಂಬ ಆಗ್ರಹ ಮುಂದಿಟ್ಟುಕೊಂಡು ನಡೆಯುತ್ತಿರುವ ಹೋರಾಟಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜನವರಿ 15 ರಿಂದ ಕಾಗಿನೆಲೆ ಪೀಠದಿಂದ ಆರಂಭ ಆಗಲಿರುವ ಕುರುಬ ಸಮುದಾಯದ ಪಾದಯಾತ್ರೆಯಲ್ಲಿ ಸಾವಿರಾರು ಬೆಂಬಲಿಗರ ಜತೆ ಪಾಲ್ಗೊಳ್ಳುವ ಸಿದ್ಧತೆ ನಡೆಸಿದ್ದಾರೆ.
ಕುರುಬರ ಎಸ್ ಟಿ ಹೋರಾಟದ ರಿಮೋಟ್ ಕಂಟ್ರೋಲ್ ಇರುವುದು RSS ಕೈಯಲ್ಲಿ ಎನ್ನುವ ಆಕ್ರೋಶವನ್ನು ಕುರುಬ ಸಮುದಾಯದ ಒಂದು ಬಣ ವ್ಯಕ್ತಪಡಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಈ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!