ಶಿವಮೊಗ್ಗ ಮೇ.14 ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಮತ್ತು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬೇಕರಿ ಹಾಗೂ ಕನ್ಫೆಕ್ಷನರೀಸ್ ಮತ್ತು ಹೈಟೆಕ್ ಅಣಬೆ ಬೇಸಾಯ ಕುರಿತ 10 ದಿನಗಳ ತರಬೇತಿ ಶಿಬಿರವನ್ನು ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಬಿ. ಹೇಮಲ ನಾಯಕ್ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ, ಮುಖ್ಯವಾಗಿ ಯುವಕ ಯುವತಿಯರಿಗೆ ಬದುಕು ಕಟ್ಟಿಕೊಳ್ಳಲು ಈ ರೀತಿಯ ಶಿಬಿರಗಳು ಉಪಯುಕ್ತವಾಗಲಿದೆ. ಹಾಗೂ ಆರೋಗ್ಯಕರ ತಿಂಡಿ ತಿನಿಸುಗಳನ್ನು ಮಾಡಲು ಬೇಕರಿ ಉದ್ಯಮ ಮತ್ತು
ಅಪೌಷ್ಟಿಕತೆಯನ್ನು ನಿರ್ವಹಣೆ ಮಾಡುವಲ್ಲಿ ಅಣಬೆ ಬೇಸಾಯ ಉದ್ಯಮಗಳು ಬಹಳ ಪ್ರಾಮುಖ್ಯತೆ ಹೊಂದಿದೆ. ಪೂರಕ ಮಾರುಕಟ್ಟೆ ಸಂಪರ್ಕದೊಂದಿಗೆ ರೈತ ಮತ್ತು ರೈತ ಮಹಿಳೆಯರು ಯಶಸ್ವಿ ಉದ್ಯಮಿಗಳು ಆಗಬಹ್ಮದು ಎಂದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್. ಸಿ. ಜಗದೀಶ್ ಮಾತನಾಡಿ, ವಿಶ್ವವಿದ್ಯಾಲಯವು 4 ಲಕ್ಷ ರೈತರಿಗೆ ಕೃಷಿ ಹಾಗೂ ಕೃಷಿಯೇತರ ತಂತ್ರಜ್ಞಾನಗಳನ್ನು ತಲುಪಿಸುವ ಗುರಿ ಹೊಂದಿದೆ.
ಬೇಕರಿ ಮತ್ತು ಅಣಬೆ ಉದ್ಯಮಗಳು ಸ್ವ ಉದ್ಯೋಗವನ್ನು ಸೃಷ್ಟಿಸ್ಮತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತಹ ಆಹಾರಗಳನ್ನು ಪೂರೈಸಲು ಹಾಗೂ ಸುಸ್ಥಿರ ಜೀವನಕ್ಕಾಗಿ ಸೂಕ್ತ ಕೌಶಲ್ಯಾಭಿವೃದ್ಧಿ ತರಬೇತಿಯು ಅತ್ಯಗತ್ಯವಾಗಿದೆ.
ಬೇಕರಿಯಲ್ಲಿ ಮೈದಾ ಹಿಟ್ಟು ಹಾಗೂ ಗೋಧಿ ಹಿಟ್ಟಿನ ಬದಲಾಗಿ ಇತರ ಪೆÇೀಷಕಾಂಶಯುಕ್ತ ಪದಾರ್ಥಗಳು ಮತ್ತು ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕು. ಅಣಬೆ ಸ್ವ ಉದ್ಯೋಗದ ಬಗ್ಗೆ, ಮೌಲ್ಯವರ್ಧನೆಯ ಬಗ್ಗೆ
ಯುವಕ ಯುವತಿಯರಲ್ಲಿ ಜ್ಞಾನವನ್ನು ಹೆಚ್ಚಿಸುವುದರೊಂದಿಗೆ, ಸ್ವ-ಉದ್ಯೋಗ ಪ್ರಾರಂಭಿಸಲು ದೊರೆಯುವ ಹಣಕಾಸಿನ ಸೌಲಭ್ಯಗಳು, ಖರ್ಚು-ವೆಚ್ಚಗಳ ನಿರ್ವಹಣೆ, ಮಾರುಕಟ್ಟೆಯ ಮಾರ್ಗಗಳ ಬಗ್ಗೆ ತರಬೇತಿಯಲ್ಲಿ ಶಿಬಿರಾರ್ಥಿಗಳು ಆಸಕ್ತಿಯಿಂದ ಕಲಿಯಬೇಕು ಮತ್ತು ತರಬೇತಿಯನ್ನು ಪಡೆದ ನಂತರ ಇತರರಿಗೂ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಬಹುದು ಎಂದರು.
ಕೃಷಿ ವಿಸ್ತರಣಾ ನಿರ್ದೇಶಕÀ ಡಾ. ಕೆ. ಟಿ. ಗುರುಮೂರ್ತಿ ಮಾತನಾಡಿ, ಶುಲ್ಕ ಸಹಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವುದು ವಿಶ್ವವಿದ್ಯಾಲಯದ ಹಲವು ವರ್ಷಗಳ ಪರಿಶ್ರಮವಾಗಿದೆ.
ಹಾಗಾಗಿ ಈ ತರಬೇತಿಯಿಂದ ಸಿಗುವ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದ ಉದ್ಯಮಶೀಲರಾಗಿ ಎಂದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಂ. ದಿನೇಶ್ ಕುಮಾರ್, ಆಯೋಜಕ ಡಾ. ನಂದೀಶ್ ಎಂ. ಎಸ್, ಡಾ. ಸುಧಾರಾಣಿ, ಡಾ. ಜಿ. ಕೆ. ಗಿರಿಜೇಶ್ ವಿವಿಧ ತಾಲೂಕುಗಳಿಂದ ಆಗಮಿಸಿದ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.