ಶಿವಮೊಗ್ಗ,ಮೇ.೦೯:
ಇಲ್ಲಿನ ರವೀಂದ್ರ ನಗರ ಹಾಗೂ ವಿನೋಬನಗರದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಗೆ ಪ್ರಸಕ್ತ ೨೦೨೩-೨೪ರ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ನೂರರಷ್ಟು ಫಲಿತಾಂಶ
ಲಭಿಸಿದೆ.
ಶೇಕಡ ೫೫ಕ್ಕಿಂತ ಹೆಚ್ಚು ಮಕ್ಕಳು ಡಿಸ್ಟ್ರಿಕ್ಷನ್ ಪಡೆದಿದ್ದು, ಬಹುತೇಕ ಎಲ್ಲರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ವಿಶೇಷ. ಶಿಕ್ಷಣದ ಜೊತೆ ಕ್ರೀಡೆ ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಮತ್ತು
ವಿಜ್ಞಾನದ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ಶಾಲೆಯ ಅತ್ಯುತ್ತಮ ಫಲಿತಾಂಶಕ್ಕೆ
ಕಾರಣಕರ್ತರಾದ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಅನೂಪ್ ಪಟೇಲ್ ಹಾಗೂ ಸಂಸ್ಥಾಪಕ ಅಧ್ಯಕ್ಷ ಎಸ್ ಕೆ ನಾರಾಯಣಸ್ವಾಮಿ ಅಭಿನಂದಿಸಿದ್ದಾರೆ