ಏಪ್ರಿಲ್ 19:: ಅಂಚೆ ಇಲಾಖೆ ವತಿಯಿಂದ ಏ.23 ರಂದು ನಗರದ ನೆಹರು ಕ್ರೀಡಾಂಗಣ, ಸಿಟಿ ಸೆಂಟರ್ ಮಾಲ್, ರಾಮಣ್ಣ ಶ್ರೇಷ್ಠಿ ಪಾರ್ಕ್ ಹಾಗೂ ಗೋಪಿ ವೃತ್ತದ ಪ್ರದಾನ ಅಂಚೆ ಕಚೇರಿ ಆವರಣದಲ್ಲಿ ಸಾರ್ವತ್ರಿಕ ಲೋಕಸಭಾ
ಚುನಾವಣೆ -2024ರ ಅಂಗವಾಗಿ ಮತದಾರರಲ್ಲಿ ಮತದಾನದ
ಜಾಗೃತಿ ಮೂಡಿಸಲು ಅಂಚೆ ಇಲಾಖೆಯ ಸಿಬ್ಬಂದಿಯವರು ಬೀದಿ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.