ಶಿವಮೊಗ್ಗ,ಏ.೦೬: ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಚುನಾವಣೆಗೆ ಬಳಸಿಕೊಳ್ಳಲು ಕೆ.ಎಸ್.ಈಶ್ವರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿ ಹೋಗಲಿ ಬಿಡಿ ಆದರೆ, ಮೋದಿಯವರ ಭಾವಚಿತ್ರ ಬಳಕೆ ಮಾಡಿಕೊಳ್ಳಲು ಎನ್ಡಿಎ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರು ಮೋದಿ ಭಾವಚಿತ್ರವನ್ನು ಪ್ರಚಾರದಲ್ಲಿ ಬಳಸುತ್ತಿರುವುದಕ್ಕೆ ರಾಘವೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಈಶ್ವರಪ್ಪ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಮೋದಿ ಭಾವಚಿತ್ರವನ್ನು ಬಳಸಲು ಅನುಮತಿ ಕೋರಿ ಹೈಕೋರ್ಟ್ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಂಸದ ರಾಘವೇಂದ್ರ ಅವರು ಮೋದಿಯವರ ಪೋಟೋ ಬಳಕೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಶ್ವರಪ್ಪ ಕೂಡ ಮೋದಿ ಅವರಪ್ಪನ ಆಸ್ತಿಯೇ ಎಂದು ಕೇಳಿದ್ದರು. ಈ ಇಬ್ಬರ ವಾದಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಇದೀಗ ಈಶ್ವರಪ್ಪನವರು ಕೇವಿಯಟ್ ಅರ್ಜಿ ಸಲ್ಲಿಸಿರುವುದಕ್ಕೆ ಸಂಸದ ಈ ಪ್ರತಿಕ್ರಿಯೆ ನೀಡಿ ಹೈಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ರಾಘವೇಂದ್ರ ಅವರ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಅವರು ತೀಕ್ಷಣ ಪ್ರತಿಕ್ರಿಯೆ ನೀಡಿ ಚುನಾವಣೆಗಳು ಬರುತ್ತವೇ ಹೋಗುತ್ತವೆ ಆದರೆ ವಿನಾಕಾರಣ ಇಂತಹ ಎಫ್ಐಆರ್ಗಳು ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ, ಮಠಾಧೀಶರು ಎಂದರೆ ನಮಗೆ ಗುರುಗಳ ಸಮಾನ, ಅವರ ಆಶೀರ್ವಾದ
ಪಡೆಯುವುದು ಸಹಜವೇ ಆಗಿದೆ. ಅವರ ಆಶೀರ್ವಾದ ಪಡೆಯುವುದೆ ತಪ್ಪು ಎಂದರೆ ಹೇಗೆ, ಯಾರೋ ಕೊಟ್ಟ ದೂರಿನಲ್ಲಿ ಈಗಾಗಿದೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಸಂಬಂಧಿಸಿದಂತೆ ಹಿಂದೂ ಯುವಕನನ್ನು ಎನ್ಐಎ ಬಂದಿಸಿತ್ತು. ಆದರೆ, ವಿಚಾರಣೆ ಮಾಡಿ ತಕ್ಷಣವೇ ವಾಪಾಸ್ಸು ಕಳುಹಿಸಿದೆ. ನಿಜವಾಗಿಯೂ ಅಲ್ಲಿ ನಡೆದಿದ್ದೇ ಬೇರೆ.ಇಲ್ಲಿ ಸಿಮ್ ದುರುಪಯೋಗವಾಗಿದೆ.
ಸಾಹಿಪ್ರಸಾದ್ರವರ ಸಿಮ್ಮನ್ನು ತೀರ್ಥಹಳ್ಳಿಯ ಅಲ್ಪಸಂಖ್ಯಾತ ಆರೋಪಿಗಳು ದುರುಪಯೋಗ ಪಡಿಸಿಕೊಂಡು ಈ ಅಪರಾಧ ಮಾಡಿದ್ದಾರೆ ಎಂದು ಈಗಾಗಲೇ ಗೊತ್ತಾಗಿದೆ. ಅದೇನೇ ಇರಲಿ ತೀರ್ಥಹಳ್ಳಿಯಲ್ಲಿ ನಡೆಯುವ ಇಂತಹ ಚಟುವಟಿಕೆಗಳ ಬಗ್ಗೆ ಬಿಗಿ ಕಾನೂನು ಬರಬೇಕು ಎಂದು ಅವರು ಆಗ್ರಹಿಸಿದರು.