…..೪ನೇ ಪುಟಕ್ಕೆ
ಮನೆ ಮನೆಗೆ ತೆರಳಿ ಮತದಾರರ ಮನವೋಲೈಸಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೀತಾಶಿವರಾಜ್ಕುಮಾರ್ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಅಧ್ಯಕ್ಷರಾದ ಮೇಲೆ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಶಿವಮೊಗ್ಗ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಉಸ್ತುವಾರಿ ಸಚಿವರ ಗೌರವವನ್ನು ಉಳಿಸುವ ಕೆಲಸವನ್ನು ಕಾರ್ಯಕರ್ತರೊಂದಿಗೆ ಸೇರಿ ಮಾಡುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ನನಗೆ ನೀಡಿದ ಜವಬ್ದಾರಿಯನ್ನು ಅತ್ಯಂತ ಪ್ರಮಾಣಿಕವಾಗಿ
ನಿರ್ವಹಿಸುವೆ ಜಿಲ್ಲಾ ಕಾಂಗ್ರೆಸ್ಸಿನ ಎಲ್ಲಾ ಘಟಕಗಳನ್ನು ಒಗ್ಗೂಡಿಸಿ ಮನಸ್ತಾಪಗಳನ್ನೆಲ್ಲ ಸರಿಪಡಿಸಿ ಲೋಕಸಭಾ ಚುನಾವಣೆಯ ಮೇಲೆ ನಿಗಾ ಹಿಟ್ಟುಕೊಂಡು ತತ್ಕ್ಷಣ್ದಿಂದಲೇ ಕಾರ್ಯ ಪ್ರವೃತ್ತರಾಗಿದ್ದೇನೆ ಎಂದರು.
ಇದೊಂದು ಒಳ್ಳೆಯ ಅವಕಾಶ ಈ ಬಾರಿ ನಾವು ಖಂಡಿತ ಗೆದ್ದೇ ಗೆಲ್ಲುತ್ತೇವೆ ಗ್ಯಾರಂಟಿಗಳು ನಮ್ಮ ಬೆಂಬಲಕ್ಕೆ ನಿಂತೆ ನಿಲ್ಲುತ್ತವೆ. ಪ್ರತಿಯೊಂದು ಫಲಾನುಭವಿಗಳ ಮನೆಗೂ ಕನಿಷ್ಟ ೪ ರಿಂದ ೫ ಸಾವಿರ ರೂ. ಆದಾಯ ಬರುತ್ತಿದೆ. ಇದು ನುಡಿದಂತೆ ನಡೆದ ಸರ್ಕಾರ. ಎಲ್ಲಾ ಗ್ಯಾರಂಟಿಗಳು ಮಧ್ಯವರ್ತಿಯ ತಲುಪದೇ ನೇರವಾಗಿ ಫಲಾನುಭವಿಗಳಿಗೆ ಸೇರುತ್ತವೆ ಎಂದರು.
ನನ್ನ ಬೂತ್ ನನ್ನ ಕೆಲಸ ಎಂಬ ಧೈಯ ವಾಕ್ಯದಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಘಟನೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿಗಳ ಜೊತೆಗೆ ಕೇಂದ್ರದ ಕಾಂಗ್ರೆಸ್ ನಾಯಕರು ಕೂಡ ತಮ್ಮ ಪ್ರಣಾಳಿಕೆಯಲ್ಲಿ ೧೦ ಗ್ಯಾರಂಟಿಗಳನ್ನು ಸೇರಿಸಿದ್ದಾರೆ. ಈ ಗ್ಯಾರಂಟಿಗಳು ಕೂಡ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರಣವಾಗುತ್ತವೆ ಎಂದರು.
ಧರ್ಮದ ಹೆಸರಿನಲ್ಲಿ ಭಾವನಾತ್ಮಕತೆಯ ಹೆಸರಿನಲ್ಲಿ ಬಿಜೆಪಿಯವರು ಇನ್ನು ಭ್ರಮೆಯಲ್ಲಿದ್ದಾರೆ. ಧರ್ಮದ ಹೆಸರು ಹೇಳಿದರೆ ಸಾಕು, ಮತ ಸಿಗುತ್ತದೆ ಎಂಬ ಆಸೆಯಿಂದ ಇದ್ದಾರೆ. ಆದರೆ, ಆ ಕಾಲ ಮುಗಿಯಿತು. ಇದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಅಡಿಯಲ್ಲಿ ಇರುವ ಸರ್ಕಾರವಾಗಬೇಕು ಎಂದರು.
ಕೇಂದ್ರ ಸರ್ಕಾರ ಈಗಾಗಲೇ ತನಿಖಾ ಸಂಸ್ಥೆಗಳನ್ನು, ಹೇಳಿದಂತೆ ಕೇಳುವಂತೆ ಮಾಡುತ್ತಿದೆ.
ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕೊಳೆ ಬಟ್ಟೆಗಳನ್ನೆಲ್ಲ ವಾಷಿಂಗ್ಮಿಷನ್ ಹಾಕಿ ಮತ್ತೆ ಕೊಳೆಯಾಗಿಯೇ ಕಾಣುವಂತೆ ಮಾಡುತ್ತಿದೆ. ಎಲ್ಲಾ ಭ್ರಷ್ಟಚಾರಿಗಳ ಬಳಿ ಚುನಾವಣೆ ಬಾಂಡ್ನ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಇವರಿಗೆ ಛೀಮಾರಿಯಾಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಎಸ್.ಕೆ.ಮರಿಯಪ್ಪ, ಚಂದ್ರಭೂ ಪಾಲ್, ಕಲೀಂ ಪಾಶಾ, ಇಸ್ಮಾಯಿಲ್ ಖಾನ್, ವೈ. ಹೆಚ್.ನಾಗರಾಜ್, ರವಿಕುಮಾರ್, ಹೆಚ್.ಸಿ. ಯೋಗೀಶ್, ಕಲಗೋಡು ರತ್ನಾಕರ್, ಬಲ್ಕೀಶ್ ಭಾನು, ಎ.ಅನಿತಾಕುಮಾರಿ, ಮಂಜುನಾಥ್ ಬಾಬು, ಎಸ್.ಪಿ.ದಿನೇಶ್, ರಮೇಶ್ ಹೆಗ್ಡೆ, ಜಿ.ಡಿ.ಮಂಜು ನಾಥ್, ಟಿ.ನೇತ್ರಾವತಿ, ರೇಖಾ ರಂಗನಾಥ್, ಶ್ರೀನಿವಾಸ್ ಕರಿಯಣ್ಣ, ರಂಗನಾಥ್ ಇದ್ದರು.