ಇದನ್ನೂ ಓದಿ
https://tungataranga.com/?p=29383
ಶಿವಮೊಗ್ಗ ಎನ್ ಇಎಸ್ ವಿದ್ಯಾರ್ಥಿಗಳ ಸಾಧನೆ/ ವಿಟಿಯು ಯುವ ಉತ್ಸವದಲ್ಲಿ ಜೆ.ಎನ್.ಎನ್.ಸಿ.ಇ ರನ್ನರ್ ಅಪ್, ಅಭಿನಂದನೆ
ಮೇಲಿನ ಲಿಂಕ್ ಬಳಸಿ ಸುದ್ದಿ ಓದಿ
ಪತ್ರಿಕೆ, ಹಾಡು, ಪ್ರಸ್ತುತ ಸುದ್ದಿ ನೀಡುವ ತುಂಗಾತರಂಗ ದಿನಪತ್ರಿಕೆ ಗುಂಪೊಂದಕ್ಕೆ ಸೇರಲು ಈ ಲಿಂಕ್ ಬಳಸಿ ಸೇರಿ
https://chat.whatsapp.com/IdmlSNllmJu7ezc1JS9JRy
ಶಿವಮೊಗ್ಗ, ಮಾ.31:
ಶಿವಮೊಗ್ಗದ ನವುಲೆ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಆಗಾಗ್ಗೆ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇದು ಪತ್ರಿಕೆಯ ಅಭಿಪ್ರಾಯವಲ್ಲ. ಆ ಭಾಗದ ಜನರ ಅಭಿಪ್ರಾಯ, ಪೋಟೋ ಕ್ಲಿಕ್ಕಿಸಲು ಹೋಗಿ ಚಿರತೆ ಬಾಯಿಗೆ ಅಹಾರವಾಗುವ ಮುನ್ನ ಸಾರ್ವಜನಿಕರು ಈ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ನವುಲೆಯ ಧವಳಗಿರಿ, ಇಂದಿರಾ ಬಡಾವಣೆ, ಶಿವಬಸವ ನಗರ, ಬಂಜಾರ ಸಭಾ ಭವನ, ಅರುಣೋದಯ ಶಾಲೆ ಹಿಂಭಾಗದ ಪ್ರದೇಶ, ಹೆಗ್ಗೇರಿ, ವೀರಭದ್ರೇಶ್ವರ ಬಡಾವಣೆ, ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ ಬಡಾವಣೆ, ಮಲ್ನಾಡ್ ಕೌಂಟಿ ಲೇಔಟ್, ಸಾನ್ವಿ ಲೇಔಟ್ ಮೊದಲಾದ ಬಡಾವಣೆಗಳ ನಾಗರೀಕರು ಇದನ್ನು ದೂರದಿಂದಲೇ ಗಮನಿಸಿದ್ದಾರೆ ಎಂಬ ಮಾಹಿತಿ ಹರಡಿದೆ.
ಇಲ್ಲಿ ಹಗಲು ರಾತ್ರಿ ಚಿರತೆಯ ಬಗ್ಗೆಯೇ ಯೋಚನೆ ಮಾಡುತ್ತಿದ್ದಾರೆ ಎಂಬುದು ಮಾಧ್ಯಮಗಳಿಗೆ ಅದರಲ್ಲೂ ತುಂಗಾತರಂಗ ಮೂಲಕ್ಕೆ ದೊರೆತ ಮಾಹಿತಿ.
ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆಯ ಸೆರೆಗೆ ಶ್ರಮಿಸಿದರೂ ಫಲಕಾರಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಲಾಗಿದೆ.
ಈ ಚಿರತೆಯ ಓಡಾಟ, ಸೆರೆ ಹಿಡಿದ ಬಗ್ಗೆ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುದ್ದಿಮೂಲ – ಶಣೈ