ಶಿವಮೊಗ್ಗ, ಮಾರ್ಚ್ ೨೨ ತೀರ್ಥಹಳ್ಳಿ ತೋಟಗಾರಿಕೆ ಇಲಾಖೆಯು ೨೦೨೩-೨೪ನೇ ಸಾಲಿಗೆ ಕೃಷಿ ಯಂತ್ರೀಕರಣ ಉಪ ಅಭಿಯಾನ ಯೋಜನೆಯ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ವಿವಿಧ ಯಂತ್ರೋಪಕರಣಗಳಿಗೆ ರೈತರಿಂದ ಅರ್ಜಿಯನ್ನು

ಕರೆಯಲಾಗಿತ್ತು. ಅರ್ಜಿಗಳನ್ನು ಪರಿಶೀಲಿಸಿ ಯಂತ್ರೋಪಕರಣಗಳನ್ನು ಖರೀದಿಸಲು ಕಾರ್ಯಾದೇಶವನ್ನು ಪಡೆದ ಎಲ್ಲಾ ರೈತರು ಕಡ್ಡಾಯವಾಗಿ ಮಾ. ೩೧ ರೊಳಗಾಗಿ ಯಂತ್ರೋಪಕರಣಗಳನ್ನು ಖರೀದಿಸಿ ನೊಂದಾಯಿತ ಬಿಲ್‌ಗಳನ್ನು ಪಡೆದುಕೊಳ್ಳುವಂತೆ ಹಾಗೂ

ಈಗಾಗಲೇ ನೀಡಲಾಗಿರುವ ಕಾರ್ಯಾದೇಶದ ಅವಧಿಯು ಏಪ್ರಿಲ್-೦೧ ರಿಂದ ರದ್ದಾಗುವುದರಿಂದ ಏ.೦೧ ರ ನಂತರ ಖರೀದಿಸಿದ ಯಂತ್ರೋಪಕರಣಗಳನ್ನು ಸಹಾಯಧನಕ್ಕೆ

ಪರಿಗಣಿಸಲಾಗುವುದಿಲ್ಲ ಎಂದು ತೀರ್ಥಹಳ್ಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!