ಸಾಗರ : ಗೋಹತ್ಯೆ ಮತ್ತು ಅಕ್ರಮ ಗೋಸಾಗಾಣಿಕೆ ಮಾಡುತ್ತಿರುವವರ ವಿರುದ್ದ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ಶನಿವಾರ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪೇಟೆ ಠಾಣೆಗೆ ಮನವಿ ಸಲ್ಲಿಸಲಾಯಿತು.


ನಗರದ ಅಣಲೆಕೊಪ್ಪದ ಆರನೇ ತಿರುವಿನ ಕೊನೆಯ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಯಾರೋ ದುಷ್ಕರ್ಮಿಗಳು ಗೋವಿನ ತಲೆಯನ್ನು ಕಡಿದು ಹಿಂದೂ ಸಮುದಾಯದವರ ಮನೆ ಎದುರು ಎಸೆದು ಹೋಗಿದ್ದಾರೆ. ಇದೊಂದು ಸಮಾಜಘಾತಕ ಕೃತ್ಯವಾಗಿದ್ದು ಹಿಂದೂ ಜಾಗರಣಾ ವೇದಿಕೆ ಈ ಕೃತ್ಯವನ್ನು ತೀವೃವಾಗಿ ಖಂಡಿಸುತ್ತದೆ. ಗೋಹಂತಕರ ಮೇಲೆ ಗೋಹತ್ಯಾ ನಿಷೇಧ ಕಾಯ್ದೆ ೨೦೨೦ರಂತೆ ಸೂಕ್ತ ಕಾನೂನುಕ್ರಮ

ಕೈಗೊಳ್ಳಬೇಕು. ಈ ಕೃತ್ಯ ನಡೆಸಿದವರನ್ನು ಮತ್ತು ಬೆಂಬಲಕ್ಕೆ ನಿಂತವರನ್ನು ತಕ್ಷಣ ಬಂಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ತಾಲ್ಲೂಕಿನ ಗಡಿಭಾಗಗಳಲ್ಲಿ ಅಕ್ರಮ

ಗೋಸಾಗಾಣಿಕೆ ಪ್ರಕರಣ ಜಾಸ್ತಿಯಾಗುತ್ತಿದೆ. ಹಿಂದೂ ಧರ್ಮೀಯರು ದೇವರೆಂದು ಪೂಜಿಸುವ ಗೋವುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದು, ಹತ್ಯೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.

ಪೊಲೀಸ್ ಇಲಾಖೆ ತಕ್ಷಣ ಇದರ ವಿರುದ್ದ ಕ್ರಮ ಕೈಗೊಳ್ಳದೆ ಹೋದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾದ್ಯಂತ ಜನಾಂದೋಲನ ರೂಪಿಸುವ ಜೊತೆಗೆ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.


ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಸಹ ಸಂಚಾಲಕ ಕೆ.ಎಚ್.ಸುಧೀಂದ್ರ, ಕೋಮಲ್ ರಾಘವೇಂದ್ರ, ಶ್ರೀಧರ್ ಸಾಗರ್, ರಾಘವೇಂದ್ರ ಕಾಮತ್, ಚೇತನ್, ಕೆ.ಆರ್.ಗಣೇಶಪ್ರಸಾದ್, ಸತೀಶ ಮೊಗವೀರ, ಸಂತೋಷ್, ಅರವಿಂದ ರಾಯ್ಕರ್, ಪ್ರೇಮ ಕಿರಣ್ ಸಿಂಗ್, ಪರಶುರಾಮ್, ಮಂಜು, ಬಸವರಾಜ್, ಪ್ರವೀಣ್, ಶ್ರೀನಿವಾಸ್, ಬಸವರಾಜ್ ಮಡಿವಾಳ್, ಅಣ್ಣಪ್ಪ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!