ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್.ಐ.ಆರ್. ವಿಚಾರದ ಬಗ್ಗೆ
ಗೃಹ ಸಚಿವರು ನೋಡಿಕೊಳ್ಳುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ಫೋಕ್ಸೊ ಕೇಸ್
ದಾಖಲಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ಇದೆ, ಈ ಬಗ್ಗೆ ನಾನು ಏನು


ಮಾತಾನಾಡುವುದಿಲ್ಲ. ಗೃಹ ಸಚಿವರು ಇದ್ದಾರೆ ಅವರು ನೋಡಿಕೊಳ್ತಾರೆ ಎಂದರು.
ಗ್ಯಾರಂಟಿ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.

ಗ್ಯಾರಂಟಿ ತುಂಬಾ
ಚೆನ್ನಾಗಿ ವರ್ಕೌಟ್ ಆಗಿದೆ.  ವಿಶ್ವಾಸ ಬಂದಿದೆ, ಜನರು ಪಕ್ಷ ಹಾಗೂ ಸರ್ಕಾರದ ಮೇಲೆ
ವಿಶ್ವಾಸ ಇಟ್ಟಿದ್ದಾರೆ. ಗ್ಯಾರಂಟಿ ಸಾಕು, ಜನರು ವಿಶ್ವಾಸ ಇಟ್ಟು ಸಹಕಾರ
ಕೊಟ್ಟಿದ್ದಾರೆ. ಗ್ಯಾರಂಟಿ ನಮ್ಮನ್ನ ಗೆಲ್ಲಿಸುತ್ತದೆ ಎಂದರು.


ಗೀತಾ ಮುಂದೆ ಶಿವಮೊಗ್ಗದಲ್ಲೇ ಇರ್ತಾರಾ ಎಂಬುದಕ್ಕೆಲ್ಲಾ ನಾನು ಉತ್ತರ ನೀಡುವುದಿಲ್ಲ.
ರಾಘವೇಂದ್ರ ಅವರದು ಏನು ಕೊಡುಗೆ ಇತ್ತು. ಹತ್ತು ವರ್ಷದ ಹಿಂದೆ ಏನು ಕೊಡುಗೆ ಇತ್ತು?
ಹಣ ಇತ್ತು ಅಷ್ಟೇ, ಹಾಗಾಗಿ ಅದನ್ನ ಬಿಡಬೇಕು. ನಿರ್ಮಲ ಸೀತಾರಾಮನ್ ಕರ್ನಾಟಕ ದಿಂದ ಹಣ
ತೆಗೆದುಕೊಂಡಿದ್ದಾರೆ. ದುಡ್ಡು ವಾಪಸ್ಸು ಕೊಟ್ಟಿಲ್ಲ, ಅವರದು ಏನು ಸಾಧನೆ ಇದೆ. ಬೇರೆ
ರಾಜ್ಯಕ್ಕೆ ದುಡ್ಡು ಕೊಟ್ಟಿದ್ದಾರೆ, ನಮ್ಗೆ ಕೊಟ್ಟಿಲ್ಲ ಎಂದು ದೂರಿದರು.


ಕಾಂಗ್ರೆಸ್ ಪಕ್ಷ ಈಗಾಗಲೇ ತೀರ್ಮಾನ ಮಾಡಿದಂತೆ ಅಭ್ಯರ್ಥಿ ಗೀತಾಶಿವರಾಜ್ ಕುಮಾರ್ ಬಹಳ
ಆಕ್ಟಿವ್ ಆಗಿ ಅವರ ಜವಾಬ್ದಾರಿಯನ್ನ ನಿರ್ವಹಿಸುತ್ತಾರೆ. ಚುನಾವಣಾ ಫಲಿತಾಂಶದ ನಂತರ
ಸಂಸದರಾಗಿ ಗೀತಾ ಶಿವರಾಜ್ ಕುಮಾರ್ ಅವರ ಜವಾಬ್ದಾರಿಯನ್ನ ನಿರ್ವಹಿಸುತ್ತಾರೆ.
ಜಿಲ್ಲೆಯ ಧ್ವನಿಯಾಗಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದರು.


ಮಾರ್ಚ್ 20 ರಂದು ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಆಗಮಿಸಿ ಪ್ರಚಾರ ಶುರು
ಮಾಡ್ತಾರೆ. 17 ರಂದು ಪೂರ್ವ ಭಾವಿ ಸಭೆ ಮಾಡ್ತೇವೆ. 20 ರಿಂದ ಚುನಾವಣೆ ಪ್ರಚಾರ
ಆರಂಭಿಸುತ್ತೇವೆ. ಆಮೇಲೆ ನಿರಂತರ ಚುನಾವಣೆ ಪ್ರಚಾರ ನಡೆಯುತ್ತವೆ. 20 ರಂದು ಶಿವಣ್ಣ
ಕೂಡ ಆಗಮಿಸುತ್ತಾರೆ. ಶಿವಣ್ಣ ಕೂಡ ಎಲ್ಲಾ ಕಡೆ ಓಡಾಡುತ್ತಾರೆ. ಬೇರೆ ಕಡೆ ಶಿವಣ್ಣ
ಪ್ರಚಾರದ ಬಗ್ಗೆ ಶಿವಣ್ಣ ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ಗೀತಾ
ಶಿವರಾಜ್ ಕುಮಾರ್ 400 ಸಭೆ ಮಾಡ್ತಾರೆ ಎಂದರು.


ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ತಾಲೂಕು ಮಟ್ಟಕ್ಕೆ
ಕರೆಸಬೇಕು ಅಂದುಕೊಂಡಿದ್ದೇವೆ. ಶಿವಣ್ಣ ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಬೇಕು
ಅಂದುಕೊಂಡಿದ್ದೇವೆ. ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೇವೆ. ಜನ ಚೆನ್ನಾಗಿ
ಸ್ಪಂದಿಸುತ್ತಿದ್ದಾರೆ. ಮೋದಿಯವರು ಶಿವಮೊಗ್ಗಕ್ಕೆ ಬಂದು ಸುಳ್ಳು ಹೇಳಿ ಹೋಗಬಹುದು
ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!