ಶಿವಮೊಗ್ಗ,ಮಾ.೧೪: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಆದ ಅನ್ಯಾಯದ ವಿರುದ್ದ ರಣಕಹಳೆ ಅನಿವಾರ್ಯ ಎಂದು ಯಂಗ್ ಬ್ರಿಗೇಡ್‌ನ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೆ.ಎಸ್.ಈಶ್ವರಪ್ಪ ..ಬಿಜೆಪಿ ಕಟ್ಟಿ ಬೆಳೆಸಿದ ಅಗ್ರಗಣ್ಯ ನಾಯಕರಲ್ಲಿ ಈಶ್ವರಪ್ಪ ಕೂಡ ಒಬ್ಬರು. ಪಕ್ಷವನ್ನು ತಾಯಿ ಎಂದು ನಂಬಿ ನಿವೃತ್ತಿ ಷೋಷಿಸಿ. ವರಿಷ್ಟರ ಅಣತಿಯಂತೆ ಕಲಸ ಮಾಡಿದ್ದರೂ ಪುತ್ರನಿಗೆ ಟಿಕೆಟ್ ಕೊಡದೆ ಅನ್ಯಾಯ ಮಾಡಿದ್ದನ್ನು ಕೆ.ಎಸ್.ಈಶ್ವರಪ್ಪ ಯಂಗ್ ಬ್ರಿಗೇಡ್ ತೀವ್ರವಾಗಿ ಖಂಡಿಸಿದೆ ಎಂದು ಅವರು ತಿಳಿಸಿದ್ದಾರೆ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಸುಮ್ಮನಿರಿಸಿತು. ಆದರೂ ಪಕ್ಷದ ಪರವಾಗಿ ಕೆಲಸ ಮಾಡಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡದಿರುವುದು ಅನ್ಯಾಯದ ಪರಮಾವಧಿಯಾಗಿದೆ. ಒಬ್ಬ ಪಕ್ಷ ನಿಷ್ಟೆಯ ಹಿರಿಯರನ್ನು ಕಡೆಗಣಿಸಿರುವ ಕ್ರಮ ಖಂಡನೀಯವಾದದ್ದು ಎಂದು ಅವರು ಹೇಳಿದ್ದಾರೆ.


ಅವರಿಗೆ ಆದ ಅನ್ಯಾಯವನ್ನು ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪ ನವರು ತಮ್ಮ ಖದರ್ ತೋರಿಸಬೇಕು ಇದಕ್ಕೆ ಕೆ.ಎಸ್.ಈಶ್ವರಪ್ಪ ಯಂಗ್ ಬ್ರಿಗೇಡ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಹೆಚ್.ಎನ್.ಮಂಜುನಾಥ್ ಹೇಳಿದ್ದಾರೆ..

By admin

ನಿಮ್ಮದೊಂದು ಉತ್ತರ

error: Content is protected !!