ಶಿವಮೊಗ್ಗ:- ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದಿಂದ ೭ನೇ ಬಾರಿಗೆ ರಾಜ್ಯಮಟ್ಟದ ಟಗರಿನ ಕಾಳಗ ವನ್ನು ಮಾ.೧೦ರ ಭಾನುವಾರ ಬೆಳಿಗ್ಗೆ ೯ ಗಂಟೆಗೆ ನ್ಯಾಷನಲ್ ಕಾಲೇಜು ಆವರಣ ( ಕುವೆಂಪು ರಂಗಮಂದಿರ ಪಕ್ಕ) ಏರ್ಪಡಿಸಲಾಗಿದೆ.


ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟಗರಿನ ಕಾಳಗಕ್ಕೆ ಚಾಲನೆ ನೀಡುವರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅತಿಥಿಗಳಾಗಿ ಭಾಗವಹಿಸುವರು.


೮ ಹಲ್ಲಿನ ಕುರಿಗೆ ಪ್ರಥಮ ಬಹುಮಾನ ೧ಲಕ್ಷರೂ, ದ್ವಿತೀಯ ಬಹುಮಾನ ೫೦ ಸಾವಿರರೂ, ೩ನೇ ಬಹುಮಾನ ಬೆಳ್ಳಿ ಗಧೆ, ೪ನೇ ಬಹುಮಾನ ಟ್ರೋಫಿ ಇರುತ್ತದೆ. ಪ್ರವೇಶ ದರ೨,೫೦೦ರೂ. ಆಗಿದೆ.


೬ ಹಲ್ಲಿನ ಕುರಿಗೆ ಪ್ರಥಮ ಬಹುಮಾನ೫೦ ಸಾವಿರರೂ, ದ್ವಿತೀಯ ಬಹುಮಾನ ೨೫ ಸಾವಿರರೂ, ತೃತೀಯ ಬಹುಮಾನ ಬೆಳ್ಳಿಗಧೆ, ೪ನೇ ಬಹುಮಾನ ಟ್ರೋಫಿ, ಪ್ರವೇಶ ದರ ೨ಸಾವಿರರೂಗಳು.
೪ ಹಲ್ಲಿನ ಕುರಿಗೆ ಪ್ರಥಮ ಬಹುಮಾನ ೪೦ಸಾವಿರರೂ, ದ್ವಿತೀಯ ೨೦ ಸಾವಿರರೂ, ತೃತೀಯ ಬೆಳ್ಳಿಗಧೆ, ೪ನೇ ಬಹುಮಾನ ಟ್ರೋಫಿ.ಪ್ರವೇಶದರ ೧,೫೦೦ರೂ. ಆಗಿದೆ.


೨ಹಲ್ಲಿನ ಕುರಿಗೆ ಪ್ರಥಮ ೩೦ ಸಾವಿರರೂ, ೨ನೇ ಬಹುಮಾನ ೧೫ ಸಾವಿರರೂ, ೩ನೇ ಬಹುಮಾನ ಬೆಳ್ಳಿ ಗಧೆ, ೪ನೇ ಬಹುಮಾನ ಟ್ರೋಫಿ, ಪ್ರವೇಶ ದರ ೧ಸಾವಿರರೂಗಳು.
ಮರಿ ಕುರಿಗೆ ಪ್ರಥಮ ಬಹುಮಾನ ೧೫ ಸಾವಿರರೂ, ದ್ವಿತೀಯ ೭,೫೦೦ರೂ, ತೃತೀಯ ಬೆಳ್ಳಿಗಧೆ, ೪ನೇ ಬಹುಮಾನ ಟ್ರೋಫಿ, ಪ್ರವೇಶ ದರ ೮೦೦ರೂ ಆಗಿದೆ.


ಹೆಚ್ಚಿನ ಮಾಹಿತಿಗಾಗಿ ಶಂಕರ ಗುಂಡ ಮೊ. ೯೮೪೫೮ ೬೧೨೪೨, ಆರ್. ಮಲ್ಲಿಕಾರ್ಜುನ ಮೊ. ೯೭೪೦೭ ೫೯೮೫೮, ಚಂದ್ರಶೇಖರ್ ೯೮೮೬೮೫೨೦೦೦, ರಾಘವೇಂದ್ರ ೯೮೪೪೪ ೭೧೨೩೪ ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!