ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಫೋನ್ ಕದ್ದ ಅಪರಿಚಿತ ಮೊಬೈಲ್ ನಲ್ಲಿದ್ದ ವಿದ್ಯಾರ್ಥಿನಿಯ ಸ್ನೇಹಿತರಿಗೆ, ಸಂಬಂಧಿಕರಿಗೆ ಹೆತ್ತ ತಂದೆಗೆ ಅವಹೇಳನ ಮೆಸೇಜ್, ಕರೆಗಳನ್ನ ಮಾಡಿರುವ ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿಕ್ಕದಾವನಂದಿ ಗ್ರಾಮದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಿಂದ ನಡೆದುಕೊಂಡು ಬರುವಾಗ ಅಪರಿಚಿತನೋರ್ವ ಆಕೆಯ ಮೊಬೈಲ್ ಕಸಿದುಕೊಂಡು ಹೋಗಿದ್ದು, ನಂತರ ಮೊಬೈಲ್

ನಲ್ಲಿರುವ ಕಾಂಟ್ಯಾಕ್ಟ್ ನಂಬರ್ ನಲ್ಲುರುವ ಸ್ನೇಹಿತರಿಗೆ ಅಶ್ಲೀಲ ಮೆಸೇಜ್ ಮಾಡಲು ಆರಂಭಿಸಿದ್ದಾನೆ‌.

ಅಶ್ಲೀಲ ಮೆಸೇಜ್ ನ ಹಿನ್ನಲೆಯಲ್ಲಿ ಎಚ್ಚೆತ್ತ ವಿದ್ಯಾರ್ಥಿನಿ ಸಿಮ್ ನ್ನ ಬ್ಲಾಕ್ ಮಾಡಿ, ನಂತರ ಡೂಪ್ಲಿಕೇಟ್ ಸಿಮ್ ಪಡೆದ ನಂತರ ಬೇರೆ ನಂಬರ್ ನಿಂದ‌ ವಿದ್ಯಾರ್ಥಿನಿಯ ಸಹೋದರಿ, ತಂದೆ, ಪಕ್ಕದ ಮನೆಯ ಪರಿಚಯಸ್ಥರಿಗೆ ಮೆಸೇಜ್ ಮತ್ತು ಕರೆ ಮಾಡಿರುವುದಾಗಿ ವಿದ್ಯಾರ್ಥಿನಿ ದೂರಿದ್ದಾರೆ.‌ ಅಪರಿಚಿತ ನಂಬರ್ ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!