ಶಿವಮೊಗ್ಗ, ಫೆ.19:
ಇದೇ ಮೊಟ್ಟ ಮೊದಲ ಬಾರಿ ಕಳೆದ ಏಳು ವರ್ಷದ ನಂತರ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಸಂಘದಲ್ಲಿ ಇರುವ ಹಣದಲ್ಲೇ ಯಶಸ್ವಿ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ತಿಳಿಸಿದರು.


ಸಂಘ ಇಡೀ ರಾಜ್ಯ ವ್ಯಾಪಿ ಅತ್ಯುತ್ತಮ ಸಂಘಟನೆಯನ್ನು ಹೊಂದಿದ್ದು, ಈಗಲೂ ಸಾಕಷ್ಟು ಹಣವನ್ನು ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗೋಸ್ಕರ ಉಳಿಸಿದೆ. ಹಾಗೂ ಇಲ್ಲಿ ಪಾರದರ್ಶಕವಾದ ವ್ಯವಹಾರ ನಮ್ಮದಾಗಿದೆ ಎಂದು ಅವರು ಹೇಳಿದರು.


ಈಗ ರಾಜ್ಯ ಸರ್ಕಾರಿ ನೌಕರ ಸಂಘದಲ್ಲಿ ಸುಮಾರು 20 ಕೋಟಿ ರೂಪಾಯಿ ಹಣ ಇದ್ದು, ಇದು ರಾಜ್ಯದ ಆರು ಲಕ್ಷ ನೌಕರರಿಗೆ ಅನುಕೂಲವಾಗುವಂತಹ ರಾಜಧಾನಿಯಲ್ಲಿ ಬಂದು ಹೋಗುವವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಹಾಗೂ ಅತ್ಯುತ್ತಮ ಸಮುದಾಯ ಭವನವನ್ನು ನಿರ್ಮಿಸುವ ಮಹಾದುದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.


ಈಗಿರುವ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಅಗತ್ಯ ಕಾರ್ಯಗಳಿಗೆ ಅನುಸಾರವಾಗಿ ರಾಜಧಾನಿಗೆ ಬಂದರೆ ಅವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

By admin

ನಿಮ್ಮದೊಂದು ಉತ್ತರ

error: Content is protected !!