ಶಿವಮೊಗ್ಗ: ಆಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಇಲ್ಲಿನ ಗೋಪಾಳದ ಬ್ರಾಹ್ಮಣ ಸೇವಾ ಸಂಘ ಹಾಗೂ ಲಲಿತಾ ಮಹಿಳಾ ಸಂಘ ಸಹಯೋಗದಲ್ಲಿ ಚಾಲುಕ್ಯ ನಗರದ ಸುರಭಿ ಸಮುದಾಯ
ಭವನದಲ್ಲಿ ಜ.೨೧ರಂದು ಸಂಜೆ ೫.೩೦ಕ್ಕೆ ಸಂಕ್ರಾತಿ ಸಮ್ಮಿಲನ ಹಾಗೂ ರಾಮನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದೆ.
ಇದೇ ದಿನ ಸಂಜೆ ೫.೩೦ರಿಂದ ೮ರವರೆಗೆ ಗೋಪಾಳದ ಶ್ರೀನಿಕೇತನ ಭಜನಾ ಮಂಡಳಿ, ಶ್ರೀ ರಾಗರಂಜನಿ
ಭಜನಾ ಮಂಡಳಿ, ಶ್ರೀ ರಂಗನಾಥ ಭಜನಾ ಮಂಡಳಿ, ಶ್ರೀ ಚೌಡೇಶ್ವರಿ ಭಜನಾ ಮಂಡಳಿ ಸಹಯೋಗದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸುರೇಶ ಉಮರಾಣಿ ಕೋರಿದ್ದಾರೆ.