ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನಿಗೆ, ೨೦ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವ ಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.


ಭದ್ರಾವತಿ ನಗರದ ನಿವಾಸಿಯಾದ ೧೯ ವರ್ಷದ ಯುವಕನೇ ಶಿಕ್ಷೆಗೆ ಗುರಿಯಾದವನೆಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ ೧,೧೦,೦೦೦ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ೦೬ ತಿಂಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ.


ಹಾಗೂ ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ೧,೦೦,೦೦೦ ರೂ. ಮತ್ತು ಪರಿಹಾರವಾಗಿ ೩,೦೦,೦೦೦ ರೂ. ನೀಡಲು ನ್ಯಾಯಾಧೀಶರಾದ ಮೋಹನ್ ಜೆ.ಎಸ್. ರವರು ೧೧-೦೧-೨೦೨೪ ರಂದು ನೀಡಿರುವ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾ ರದ ಪರವಾಗಿ ಸರ್ಕಾರಿ ಅಭಿಯೋಜ ಕರುಗಳಾದ ಹರಿಪ್ರಸಾದ್ ಮತ್ತು ಶ್ರೀಧರ್ ವಾದ ಮಂಡಿಸಿದ್ದರು.


ಘಟನೆ ಹಿನ್ನೆಲೆ : ಶಿಕ್ಷೆಗೊಳಗಾದ ಯುವಕನು ೧೫ ವರ್ಷದ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಕಿರುಕುಳ ನೀಡಿದ್ದ.ಬಾಲಕಿಯು ಗರ್ಭೀಣಿಯಾಗಿದ್ದಳು. ಈ ಕುರಿತಂತೆ ೨೦೨೨ ನೇ ಸಾಲಿನಲ್ಲಿ ನೊಂದ ಬಾಲಕಿಯ ತಂದೆಯು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಂದಿನ ತನಿಖಾಧಿಕಾರಿಗಳಾಗಿದ್ದ ಸರ್ಕಲ್ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!