ಕನ್ನಡದ ಪ್ರಥಮ ಅನುಭಾವಿ ಕವಿ, ಬಯಲು ತತ್ತ್ವದ ಪ್ರತಿಪಾದನೆ ಮಾಡಿದ ದಾರ್ಶನಿಕ, ಶೂನ್ಯಪೀಠದ ಪ್ರಥಮ ಅಧ್ಯಕ್ಷ, ಪ್ರಜಾಪ್ರಭುತ್ವದ ಮೊದಲ ಮಾದರಿ ಅನುಭವ ಮಂಟಪದ ಪ್ರಥಮ ಅಧ್ಯಕ್ಷ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬೆಳ್ಳಿಗಾವಿಯಲ್ಲಿ ಜನಿಸಿದ ಮಹಾಶರಣ ಅಲ್ಲಮಪ್ರಭುದೇವರ ಹೆಸರನ್ನು ಶಿವಮೊಗ್ಗ ನಗರದ ಹಳೇ

ಕಾರಾಗೃಹದ ಮೈದಾನಕ್ಕೆ ಇಡುವುದು ಸೂಕ್ತ ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದು. ಇದು ಶಿವಮೊಗ್ಗ ಜಿಲ್ಲೆಯ ಜನತೆಗೆ ಹಾಗೂ ಬಸವ ತತ್ವ ಅಭಿಮಾನಿಗಳಿಗೆ ಅಪಾರ ಸಂತೋಷ ಉಂಟುಮಾಡಿದೆ. ಜಿಲ್ಲೆಯ ನಾಗರಿಕರ ಪರವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ*

*2019ರ ಜನವರಿಯಲ್ಲಿ ಶಿವರಾತ್ರೀಶ್ವರರ 1059ನೆಯ ಜಯಂತಿ ಮಹೋತ್ಸವವನ್ನು ಆಚರಿಸುವಾಗ ಈ ಜಾಗಕ್ಕೆ ಅಲ್ಲಮಪ್ರಭು ಬಯಲು ಎಂದೇ ನಾಮಕರಣ ಮಾಡಿದ್ದು, ಅದನ್ನು ಹಾಗೆಯೇ ಕರೆಯಬೇಕೆಂದು ಬಹಿರಂಗ ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರುಗಳವರು ಜಿಲ್ಲೆಯ ಜನಪ್ರತಿನಿಧಿಗಳಿಗೆ ಸೂಚಿಸಿದ್ದರು. ಅಂದು ಎಲ್ಲ ಜನಸಮುದಾಯದವರು ಒಪ್ಪಿ ಘೋಷಿಸಿದ್ದ ಹೆಸರನ್ನು ಮುಖ್ಯಮಂತ್ರಿ

ಸಿದ್ದರಾಮಯ್ಯನವರು ಇಂದು ಅಧಿಕೃತವಾಗಿ ಘೋಷಿಸಿರುವುದು, 12ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ, ಜಗತ್ತಿನ ಪ್ರಜಾಪ್ರಭುತ್ವದ ತಂದೆಯೆಂದೇ ಖ್ಯಾತಿಯ ಅನುಭವ ಮಂಟಪಕ್ಕೆ ಸಂದ ಗೌರವವಾಗಿದೆ*

*ಈ ವಿಚಾರವಾಗಿ ಮುಖ್ಯಮಂತ್ರಿಗಳ ಮತ್ತು ಸರ್ಕಾರದ ಗಮನ ಸೆಳೆದ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರಿಗೆ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಗೆ , ಸಚಿವರುಗಳಿಗೆ ಸಂಸದರಿಗೆ , ಜಿಲ್ಲೆಯ ಎಲ್ಲ ಶಾಸಕರು ಜನ ಪ್ರತಿನಿಧಿಗಳಿಗೆ ಕೃತಜ್ಞತೆಗಳು*