ಶಿವಮೊಗ್ಗ ನಗರ ಹೊರವಲಯದ ಹರಿಗೆ ಸಮೀಪದಲ್ಲಿರುವ ಕೆಇಬಿ ಕ್ವಾಟ್ರಸ್ ಹಿಂಭಾಗದಲ್ಲಿ ಯುವಕನೋರ್ವನನ್ನು ಕೊಲೆ ಮಾಡಲಾಗಿದೆ.
ಕಾರ್ತಿಕ್ (23) ಕೊಲೆಯಾದ ಯುವಕ. ಈತ ವಿದ್ಯಾನಗರದ ಸುಭಾಷ್ ನಗರದ ನಿವಾಸಿಯಾಗಿದ್ದು, ಈತನ ಸಾವಿಗೆ ಪ್ರೇಮ ಪ್ರೀತಿಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಕಾರ್ತಿಕ್ ಪ್ರೀತಿಸಿದ ಯುವತಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು. ಈ ಪ್ರಕರಣ ಕೋಟೆ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಆದರೆ ಕಾರ್ತಿಕ್ ಮರ್ಡರ್ ಆಗಿರುವ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಠಾಣೆ ಸಿಪಿಐ ಸಂಜೀವ್ ಕುಮಾರ್ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.