ಶಿವಮೊಗ್ಗ : ಆರೋಗ್ಯ ಶಿಬಿರವನ್ನು ಕಾರಾಗೃಹದಲ್ಲಿ ಏರ್ಪಡಿಸಿದ್ದು ತುಂಬಾ ಸಂತೋಷವಾಗಿದೆ ಆರೋಗ್ಯವೇ ಮುಖ್ಯ ಆರೋಗ್ಯ ಒಂದಿದ್ದರೆ ಭಾಗ್ಯವು ಎಲ್ಲವೂ ಇರುತ್ತದೆ ಸದೃಢ ದೇಹ ಉತ್ತಮ ಆರೋಗ್ಯ ಶೈಲಿಗೆ ಪ್ರತಿನಿತ್ಯ ವ್ಯಾಯಾಮ ಯೋಗ ಪ್ರಾಣಾಯಾಮ ಅಗತ್ಯ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ರಂಗನಾಥ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಮತ್ತು ಸಂಗಮ್ ಹೆಲ್ತ್ ಕೇರ್ ( ಆಯುರ್ವೇದ ಸ್ಪೆಶಾಲಿಟಿ) ಹಾಸ್ಪಿಟಲ್ ವತಿಯಿಂದ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗಮ್ ಹೆಲ್ತ್ ಕೇರ್ ಹಾಸ್ಪಿಟಲಿನ ವೈದ್ಯ ಡಾ.ವರುಣ್ ಮತ್ತು ೧೦ ಜನ ವೈದ್ಯರ ತಂಡದಿಂದ ಸುಮಾರು ೫೩೦ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಗಣೇಶ್, ವಿಜಯ್ ಕುಮಾರ್, ವಸಂತ್ ಹೋಬಳಿದಾರ್ , ಮಂಜುನಾಥ ಕದಂ, ಅರುಣ್ ದೀಕ್ಷಿತ್, ಸತೀಶ್ಚಂದ್ರ ಬಸವರಾಜ್ , ಶಿವಮೊಗ್ಗ ಜಿಲ್ಲಾ ಕಾರಾಗೃಹದ ಅಸಿಸ್ಟೆಂಟ್ ಸೂಪರ್ಡೆಂಟ್ ಶಿವಾನಂದ್ ಶಿವಪುರ, ಜೈಲರ್ ಅನಿಲ್ ಕುಮಾರ್, ಸ್ಟಾಫ್ ನರ್ಸ್ ಮೋಹನ್ ಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.